ಸಹೋದ್ಯೋಗಿಗೆ ಸುಪಾರಿ ನೀಡಿದ್ದ ಪ್ರಕರಣದಲ್ಲಿ ಪತ್ರಕರ್ತ ರವಿ ಬೆಳಗೆರೆಗೆ ಸೆಷನ್ಸ್​​​ ಕೋರ್ಟ್​​​ ಜಾಮೀನು ನೀಡಿದೆ.

ಬೆಂಗಳೂರು (ಡಿ.21): ಸಹೋದ್ಯೋಗಿಗೆ ಸುಪಾರಿ ನೀಡಿದ್ದ ಪ್ರಕರಣದಲ್ಲಿ ಪತ್ರಕರ್ತ ರವಿ ಬೆಳಗೆರೆಗೆ ಸೆಷನ್ಸ್​​​ ಕೋರ್ಟ್​​​ ಜಾಮೀನು ನೀಡಿದೆ.

1 ಲಕ್ಷ ರೂಪಾಯಿ ಬಾಂಡ್​​, ಇಬ್ಬರು ಶೂರಿಟಿ ಹಾಗೂ ಸಾಕ್ಷಿಗಳ ಮೇಲೆ ಪ್ರಭಾವ ಬೀರದಂತೆ ಷರತ್ತು ವಿಧಿಸಿ ಕೋರ್ಟ್​​ ಜಾಮೀನು ಮಂಜೂರು ಮಾಡಿದೆ. ಮತ್ತೊಂದೆಡೆ ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿದ್ದು, ಹೈಕೋರ್ಟ್​ ರಜೆ ಮುಗಿಸಿದ ಮೇಲೆ ಎಫ್​’ಐಆರ್​ ರದ್ದು ಕೋರಿ ಅರ್ಜಿ ಸಲ್ಲಿಸುವುದಾಗಿ ರವಿ ಬೆಳಗೆರೆ ಪರ ವಕೀಲ ದಿವಾಕರ್​ ತಿಳಿಸಿದ್ದಾರೆ.

ಮತ್ತೊಂದೆಡೆ ಸೆಷನ್ಸ್​ ಕೋರ್ಟ್​ ಜಾಮೀನು ರದ್ದು ಕೋರಿ ಹೈಕೋರ್ಟ್​ ಮೆಟ್ಟಿಲೇರಲು ಸುನಿಲ್​ ಹೆಗ್ಗರವಳ್ಳಿ ಮುಂದಾಗಿದ್ದಾರೆ. ಆನಾರೋಗ್ಯದಿಂದ ಬಳಲುತ್ತಿರುವ ರವಿಬೆಳಗೆರೆ ಮಧ್ಯಂತರ ಜಾಮೀನು ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಮುಂದುವರೆಸಿದ್ದು ಇಂದು ಬಿಗ್​ ರಿಲೀಫ್​​ ಸಿಕ್ಕಂತಾಗಿದೆ.