ಅಲ್ಲದೆ ಶೇ. 100ಕ್ಕೆ 100 ಅಂಕ ಪಡೆದಿದ್ದು, ವಿದ್ಯಾರ್ಥಿಯೊಬ್ಬ ಇಷ್ಟು ಅಂಕ ಪಡೆದಿದ್ದು ಇದೇ ಮೊದಲು.

ಜೈಪುರ(ಏ.28): ಕಾಂಪೌಂಡರ್ ಒಬ್ಬರ ಪುತ್ರ ಕಲ್ಪಿತ್ ವೀರ್ ಅಖಿಲ ಭಾರತ ಮಟ್ಟದಲ್ಲಿ ನಡೆಸುವ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಲ್ಲಿ (ಜೆಇಇ) 2017ನೇ ಸಾಲಿನಲ್ಲಿ ದೇಶಕ್ಕೆ ಮೊದಲ ರ‌್ಯಾಂಕ್ ಬಂದಿದ್ದಾನೆ. ಅಲ್ಲದೆ ಶೇ. 100ಕ್ಕೆ 100 ಅಂಕ ಪಡೆದಿದ್ದು, ವಿದ್ಯಾರ್ಥಿಯೊಬ್ಬ ಇಷ್ಟು ಅಂಕ ಪಡೆದಿದ್ದು ಇದೇ ಮೊದಲು.

ಇವರು ರಾಜಸ್ತಾನದವರಾಗಿದ್ದು ಈತನ ತಂದೆ ಆಸ್ಪತ್ರೆಯಲ್ಲಿ ಕಾಂಪೌಡರ್ ಆಗಿದ್ದಾರೆ. ಅಖಿಲ ಭಾರತ ಮಟ್ಟದಲ್ಲಿ ಏಪ್ರಿಲ್ -2ರಂದು ಜೆಇಇ ಪರೀಕ್ಷೆಯನ್ನು ನಡೆಸಲಾಗಿತ್ತು. ಒಟ್ಟು 10.2 ಲಕ್ಷ ಮಂದಿ ಪರೀಕ್ಷೆ ಬರೆದಿದ್ದರು. ಇವರಲ್ಲಿ 2.20 ಲಕ್ಷ ಮಂದಿ ಮೇ 21 ರಂದು ನಡೆಯುವ ಜೆಇಇ ಮುಂದುವರಿದ ಪರೀಕ್ಷೆಗಳಿಗೆ ಅರ್ಹರಾಗಿದ್ದಾರೆ.