ಚಿತ್ರದುರ್ಗ: ಜಿಗ್ನೇಶ್ ಮೇವಾನಿ ವಿರುದ್ದ ನಗರ ಪೋಲಿಸ್ ಠಾಣೆಯಲ್ಲಿ‌ ದೂರು ದಾಖಲಾಗಿದೆ. ಮೋದಿ‌ ಕಾರ್ಯಕ್ರಮದಲ್ಲಿ ಕುರ್ಚಿತೂರಿ ತೊಂದರೆ ಮಾಡಿ‌ ಎಂಬ ಹೇಳಿಕೆಯ ಹಿನ್ನಲೆಯಲ್ಲಿ  ಚುನಾವಣಾಧಿಕಾರಿಗೆ ಬಿಜೆಪಿ ಚಿತ್ರದುರ್ಗ ಘಟಕ ದೂರು ನೀಡಿತ್ತು.

ಚುನಾವಣಾ ಆರ್'ಓ ಅವರು ದೂರಿನ ಮೇರೆಗೆ ನಗರ ಪೋಲಿಸ್ ಠಾಣೆ ಪೋಲಿಸರು ದೂರು ದಾಖಲಿಸಿಕೊಂಡಿದ್ದಾರೆ. ಚುನಾವಣಾ ಘಟಕ ಷರತ್ತು ವಿಧಿಸಿದ್ದರೂ ಪ್ರಧಾನಿ‌ ಮೋದಿ ವಿರುದ್ದ ಮೇವಾನಿ ಪ್ರಚೋದನಕಾರಿ ಹೇಳಿಕೆ ನೀಡಿದ್ದರು.