ಮಾಜಿ ಗಗನಸಖಿ ಪ್ರೇರಣಾ, ಮೈಸೂರಿನ ಪ್ರಸನ್ನಕುಮಾರ್, ಕೃತಿಕಾ ನೇಮಕ ವನ್ಯಜೀವಿ ಸಂರಕ್ಷಣೆ ಬಗ್ಗೆ ಗೊತ್ತಿಲ್ಲದಿದ್ದರೂ ಹುದ್ದೆ: ರಾಜ್ಯಪಾಲರಿಗೆ ದೂರು

ಬೆಂಗಳೂರು: ವನ್ಯಜೀವಿ ಸಂರಕ್ಷಣೆ ಕ್ಷೇತ್ರದ ಬಗ್ಗೆ ಯಾವುದೇ ಅರಿವು ಇಲ್ಲದಿರುವ ಮಾಜಿ ಗಗನಸಖಿ ಪ್ರೇರಣಾ ಎಂಬುವರನ್ನು ಗೌರವ ವನ್ಯಜೀವಿ ಪಾಲಕರನ್ನಾಗಿ ನೇಮಕ ಮಾಡಲಾಗಿದೆ ಎಂದು ವ್ಯಕ್ತಿಯೊಬ್ಬರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಐಟಿ ವಿಭಾಗದ ಜಂಟಿ ಕಾರ್ಯದರ್ಶಿ ಪ್ರೇರಣಾ ಬಿ.ಕೆ. (ಪ್ರೇರಣಾ ಅಶಿಶ್) ಅವರನ್ನು ಚಾಮರಾಜನಗರ ಭಾಗದ ವನ್ಯಜೀವಿ ಪಾಲಕರಾಗಿ ನೇಮಿಸಲಾಗಿದೆ.

(ಪ್ರೇರಣಾ ಬಿ.ಕೆ.)

2017ರಿಂದ 19ರವರೆಗೆ ಹುದ್ದೆಯಲ್ಲಿ ಮುಂದುವರೆಯಲು ಸರ್ಕಾರ ಆದೇಶಿಸಿದೆ. ಬೆಂಗಳೂರು ಮೂಲದವರಾದ ಪ್ರೇರಣಾ ಅವರಿಗೆ ವನ್ಯಜೀವಿ ಸಂರಕ್ಷಣೆ ಬಗ್ಗೆ ಯಾವುದೇ ಅರಿವಿಲ್ಲದಿದ್ದರೂ ಸರ್ಕಾರ ನೇಮಕ ಮಾಡಿದೆ ಎಂದು ಆರೋಪಿಸಿ ನಾಗರಾಜಗೌಡ ಎಂಬುವವರು ದೂರು ನೀಡಿದ್ದಾರೆ.

ಪ್ರೇರಣಾ ಮೂಲತಃ ಉಡುಪಿಯವರು ಎಂದು ತಿಳಿದು ಬಂದಿದೆ. ಇದೇ ವೇಳೆ ಮೈಸೂರಿನ ಭಾಗದ ವನ್ಯಜೀವಿ ಪಾಲಕರನ್ನಾಗಿ ಬಿ.ಕೃತಿಕಾ ಮತ್ತು ಬೆಂಗಳೂರು ಗ್ರಾಮಾಂತರ ವಿಭಾಗದ ವನ್ಯಜೀವಿ ಪಾಲಕರನ್ನಾಗಿ ಪ್ರಸನ್ನಕುಮಾರ್ ಅವರನ್ನು ನೇಮಕ ಮಾಡಿರುವ ಬಗ್ಗೆಯೂ ದೂರಿನಲ್ಲಿ ಪ್ರಸ್ತಾಪಿಸಲಾಗಿದೆ.

ಕೃತಿಕಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೆಂಟರು ಎಂಬ ಒಂದೇ ಕಾರಣಕ್ಕೆ ನೇಮಕ ಮಾಡಲಾಗಿದೆ. ಪ್ರಸನ್ನಕುಮಾರ್ ಪ್ರಾಥಮಿಕ ಶಿಕ್ಷಣವನ್ನೂ ಪೂರೈಸದಿದ್ದರೂ ನೇಮಕ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ