ಗಂಡನ ಮನೆಯವರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಮೈಸೂರಿನ ಅಕ್ಷತಾ ನಿವಾಸದಲ್ಲಿ ಪೋಷಕರ ಗೋಳಾಟ ಹೇಳತೀರದಾಗಿದೆ. ಇದ್ದ ಇಬ್ಬರು ಮಕ್ಕಳಲ್ಲಿ ಒಬ್ಬಳನ್ನು ಕಳೆದುಕೊಂಡಿರುವ ಅವರು, ಆಕಾಶವೇ ಕಳಚಿ ಬಿದ್ದಂತೆ ದುಖಃಪಡುತ್ತಿದ್ದಾರೆ.

ಮೈಸೂರು(ನ.15): ಗಂಡನ ಮನೆಯವರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಮೈಸೂರಿನ ಅಕ್ಷತಾ ನಿವಾಸದಲ್ಲಿ ಪೋಷಕರ ಗೋಳಾಟ ಹೇಳತೀರದಾಗಿದೆ. ಇದ್ದ ಇಬ್ಬರು ಮಕ್ಕಳಲ್ಲಿ ಒಬ್ಬಳನ್ನು ಕಳೆದುಕೊಂಡಿರುವ ಅವರು, ಆಕಾಶವೇ ಕಳಚಿ ಬಿದ್ದಂತೆ ದುಖಃಪಡುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಕ್ಷತಾ ತಂದೆ ಜಗದೀಶ್​ ಅವರಿಗಂತೂ ಮಗಳ ಸಾವನ್ನು ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ತಮ್ಮ ಅಳಿಯ ಹಾಗೂ ಬೀಗರ ಧನ ದಾಹಕ್ಕೆ ನನ್ನ ಮುದ್ದಾದ ಮಗಳು ಬಲಿಯಾಗಿದ್ದು, ಆರೋಪಿಗಳಿಗೆ ತಕ್ಷೆ ಕೊಡಿಸಿ ಸ್ವಾಮಿ ಎಂದು ಅಳುತ್ತಿದ್ದಾರೆ. ಮಗಳು ಚೆನ್ನಾಗಿರಲೆಂದು ದುಬಾರಿ ಖರ್ಚುಮಾಡಿ ಮದುವೆ ಮಾಡಿಕೊಟ್ಟ ನಾನು ಮದುವೆ ನಂತರವೂ ಆಕೆಯ ಖರ್ಚುಗಳನ್ನು ಭರಿಸುತ್ತಿದ್ದೆ. ಅಳಿಯ ಹೇಳಿದಂತೆಲ್ಲಾ ಕೇಳುತ್ತಿದ್ದೆ. ಆದರೂ ಈಗ ಅವರ ಕಿರುಕುಳದಿಂದ ನನ್ನ ಮಗಳು ಬಲಿಯಾಗಿದ್ದಾಳೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

ಮದುವೆಯಾಗಿ 4 ವರ್ಷ ಆದರೂ ನಮ್ಮ ಮಗಳು ನಮ್ಮ ಮನೆಯಲ್ಲಿ ಇದ್ದುದ್ದೇ ಹೆಚ್ಚು. ಅವಳಿಗೆ ನಿತ್ಯ ಕಿರುಕುಳ ನೀಡಿ ತವರಿಗೆ ಕಳುಹಿಸುತ್ತಿದ್ದರು. ನಾನು ಮಗಳ ಸಂಸಾರ ಸರಿ ಮಾಡಲು ಸಾಕಷ್ಟು ಭಾರಿ ಪ್ರಯತ್ಯ ಮಾಡಿದ್ದು, ಬೆಂಗಳೂರಿನ ಕುಟುಂಬ ನ್ಯಾಯಾಲಯದಲ್ಲಿ ಇಬ್ಬರ ನಡುವೆ ಸಾಕಷ್ಟು ಭಾರಿ ಕೌನ್ಸಿಲಿಂಗ್​ ನಡೆಸಿದ್ದರು. ಕೊನೆಯ ಭಾರಿ ನವೆಂಬರ್​ 11 ರಂದು ಕೌನ್ಸಿಲಿಂಗ್​ ನಡೆದಾಗ ಆರೋಪಿ ಅಳಿಯ ಮಂಜುನಾಥ್​ ನನ್ನ ಮಗಳು ಅಕ್ಷತಾಳನ್ನು ಕರೆದುಕೊಂಡು ಹೋಗಲು ಒಂದು ಲಿಸ್ಟ್​ ನೀಡಿದ್ದ. ಅದರಲ್ಲಿ ಆತನಿಗೆ ಬಿಎಂಡಬ್ಯ್ಲು ಕಾರು ನೀಡಿಬೇಕು, ಮಗಳು ಆತನ ಮನೆಗೆ ಹೋದರೆ ಅವನ ಪೋಷಕರು ಹೇಳಿದಂತೆ ಕೇಳಬೇಕು. ಮನೆಯಲ್ಲಿ ಆಳಿನಂತೆ ಇದರಬೇಕು ಎಂದೆಲ್ಲ ತಮ್ಮ ಮಗಳಿಗೆ ಹೇಳಿದ್ದನಂತೆ. ಕೌನ್ಸಿಲಿಂಗ್​ ಮುಗಿಸಿ ಬಂದ ಮಗಳು ನೊಂದು ಈ ರೀತಿ ಮಾಡಿಕೊಂಡಿದ್ದಾಳೆ ಎನ್ನುವುದು ಅವರ ಆರೋಪ. 

ಎಲ್ಲಾ ಗಲಾಟೆಗಳ ನಡುವೆ ಅಳಿಯನಿಗಾಗಿ ಮೈಸೂರಿನ ವಿಜಯನಗರ ಬಡಾವಣೆಯಲ್ಲಿ 30&40 ಅಳತೆಯ ನಿವೇಶನ ಕೊಡಿಸಿದ್ದೆ, ಎಸ್​.ಬಿ.ಎಂ. ಬ್ಯಾಂಕ್​ನ'ಲ್ಲಿ 1.5 ಲಕ್ಷದ ಡಿಡಿ ಕೊಟ್ಟಿದ್ದೆ, ಆತ ಹೇಳಿದಂತೆಲ್ಲಾ ಕೇಳಿದ್ದೆ ಎಂದು ಅಕ್ಷತಾ ತಂದೆ ಜಗದೀಶ್​ ಆರೋಪಿಸಿದ್ದಾರೆ. ಆದರೂ ಹೆಚ್ಚಿನ ವರದಕ್ಷಿಣೆಗಾಗಿ ಅಳಿಯ ಮಂಜುನಾಥ್​, ಬೀಗರಾದ ಪುಟ್ಟೇಗೌಡ ಮತ್ತು ಸುಧಾಮಣಿ ಹಾಗೂ ಆಕೆಯ ಅತ್ತಿಗೆ ನೇತ್ರಾವತಿ ಕಿರುಕುಳ ನೀಡಿ ನಮ್ಮ ಮಗಳನ್ನು ಸಾಯುವಂತೆ ಮಾಡಿದ್ದಾರೆ ಎಂದು ಜಗದೀಶ್​ ಆರೋಪಿಸಿದ್ದಾರೆ.

ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳು ತಲೆ ಮರೆಸಿಕೊಂಡಿದ್ದು, ಪೋಲಿಸರು ಹುಡುಕಾಟ ಮುಂದುವರೆಸಿದ್ದಾರೆ.