ಸಚಿವ ಡಿ.ಕೆ ಶಿವಕುಮಾರ್ ಗೆ ಬಂಧನ ಭೀತಿ..?

First Published 19, Jun 2018, 12:31 PM IST
Complaint Aganist Minister DK Shivakumar
Highlights

 ರಾಜ್ಯ ರಾಜಕಾರಣದ ಟ್ರಬಲ್ ಶೂಟರ್ ಎಂದೇ ಖ್ಯಾತರಾಗಿರುವ ಡಿ.ಕೆ ಶಿವಕುಮಾರ್ ಅವರಿಗೆ ಇದೀಗ  ಸಂಕಷ್ಟ ಎದುರಾಗಿದೆ.  ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಿ.ಕೆ.ಶಿವಕುಮಾರ್ ವಿರುದ್ಧ  ಇದೀಗ ಐಟಿ ಇಲಾಖೆಯಿಂದ  ಮತ್ತೊಂದು ದೂರು ದಾಖಲಾಗಿದೆ. 
 

ಬೆಂಗಳೂರು : ರಾಜ್ಯ ರಾಜಕಾರಣದ ಟ್ರಬಲ್ ಶೂಟರ್ ಎಂದೇ ಖ್ಯಾತರಾಗಿರುವ ಡಿ.ಕೆ ಶಿವಕುಮಾರ್ ಅವರಿಗೆ ಇದೀಗ  ಸಂಕಷ್ಟ ಎದುರಾಗಿದೆ.  ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಿ.ಕೆ.ಶಿವಕುಮಾರ್ ವಿರುದ್ಧ  ಇದೀಗ ಐಟಿ ಇಲಾಖೆಯಿಂದ  ಮತ್ತೊಂದು ದೂರು ದಾಖಲಾಗಿದೆ. 
 
ಡಿ.ಕೆ. ಶಿವಕುಮಾರ್ ವಿರುದ್ಧ ಈಗಾಗಲೇ 3 ಕೇಸ್ ದಾಖಲಿಸಿದ್ದು, ಇದೀಗ ಮತ್ತೊಂದು ದೂರು ದಾಖಲಾಗಿದೆ. ಕೋಟ್ಯಾಂತರ ರೂಪಾಯಿ ವ್ಯವಹಾರ ಮುಚ್ಚಿಟ್ಟು  ತೆರಿಗೆ ವಂಚನೆ ಮಾಡಿದ ಆರೋಪದ ಅಡಿಯಲ್ಲಿ ಐಟಿ ಇಲಾಖೆ ಅಧಿಕಾರಿಗಳಿಂದ ಆರ್ಥಿಕ ಅಪರಾಧ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ. ಐಟಿ ಕಾಯಿದೆ ಸೆಕ್ಷನ್ 277, 278 ಹಾಗೂ ಐಪಿಸಿ ಸೆಕ್ಷನ್ 193, 199, 120(ಬಿ) ಅಡಿ ದೂರು ದಾಖಲು ಮಾಡಲಾಗಿದೆ. 

ಡಿ.ಕೆ. ಶಿವಕುಮಾರ್ , ಸಚಿನ್‌ ನಾರಾಯಣ್, ಸುನಿಲ್ ಕುಮಾರ್ ಶರ್ಮಾ, ಆಂಜನೇಯ ಹನುಮಂತಯ್ಯ ಮತ್ತು ರಾಜೇಂದ್ರ ವಿರುದ್ಧ ದೂರು ದಾಖಲಾಗಿದ್ದು, ಸಮನ್ಸ್ ಜಾರಿ ಮಾಡಲಾಗಿದೆ. ಆಗಸ್ಟ್ 2 ರಂದು ಡಿಕೆಶಿ ಸೇರಿ ಎಲ್ಲಾ ಆರೋಪಿಗಳು ಖುದ್ದು ಹಾಜರಾಗುವಂತೆ  ಸಮನ್ಸ್ ನಲ್ಲಿ ತಿಳಿಸಲಾಗಿದೆ. 

ಈ ಮೊದಲು ದಾಖಲಿಸಿರುವ ಕೇಸ್ ಗಳಲ್ಲಿ ಸಚಿವ ಡಿ.ಕೆ ಶಿವಕುಮಾರ್ ಅವರು ಜಾಮೀನು ಪಡೆದಿದ್ದು, ಇದೀಗ ದಾಖಲಾಗಿರುವ ಕೇಸ್‌ನಲ್ಲಿ ಡಿಕೆಶಿ ಗೆ ಬಂಧನ ಭೀತಿ ಎದುರಾಗಿದೆ.  

loader