ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ವಿರುದ್ಧ ದೂರು ದಾಖಲಾಗಿದೆ. ಬಾರ್ಬಿ ಡಾಲ್ ಖ್ಯಾತಿಯ ನಿವೇದಿತಾ ಗೌಡ ಅವರು ಕೀ ಕೀ ಡ್ಯಾನ್ಸ್ ಮಾಡಿದ ಹಿನ್ನೆಲೆಯಲ್ಲಿ ದೂರು ನೀಡಲಾಗಿದೆ. 

ಬೆಂಗಳೂರು : ಕೀಕಿ ಡ್ಯಾನ್ಸ್ ಸವಾಲು ಸ್ವೀಕರಿಸಿ ವಿವಾದಕ್ಕೀಡಾಗಿರುವ ಬಿಗ್ ಬಾಸ್ ಖ್ಯಾತಿಯ ಮೈಸೂರಿನ ನಿವೇದಿತಾ ಗೌಡ ವಿರುದ್ಧ ಹಲಸೂರು ಗೇಟ್ ಸಂಚಾರ ಠಾಣೆಯಲ್ಲಿ ಕನ್ನಡ ಪರ ಸಂಘಟನೆ ಬುಧವಾರ ದೂರು ನೀಡಿದೆ. ನಿವೇದಿತಾ ಅವರನ್ನು ಅನುಸರಿಸುವ ಜನರಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೀಗಿರುವಾಗ ಕೀಕಿ ಡ್ಯಾನ್ಸ್ ಎಂಬ ಅಪಾಯಕಾರಿ ಸವಾಲು ಸ್ವೀಕರಿಸಿ, ಅದರ ವಿಡಿಯೋ ವನ್ನು ನಿವೇದಿತಾ ಸಾಮಾಜಿಕ ಜಾಲ ತಾಣಗಳಲ್ಲಿ ಆಪ್‌ಲೋಡ್ ಮಾಡಿದ್ದಾರೆ. ಈ ಮೂಲಕ ಕೆಲವರಿಗೆ ಪ್ರಾಣಹಾನಿ ಉಂಟುಮಾಡಬಹುದಾದ ನೃತ್ಯದಲ್ಲಿ ಪಾಲ್ಗೊಳ್ಳು ವಂತೆ ಪ್ರಚೋದಿಸಿದ್ದಾರೆ ಎಂದು ಕರ್ನಾಟಕ ಒಕ್ಕೂಟದ ಅಧ್ಯಕ್ಷ ನಾಗೇಶ್ ದೂರಿದ್ದಾರೆ.