ಪೂಜೆಗೆ ರೂ.20 ಲಕ್ಷ ಮೀಸಲಿರಿಸಿರುವ ಬಗ್ಗೆ ಸಚಿವರು ಒಪ್ಪಿಕೊಂಡಿದ್ದಾರೆ. ಇದಕ್ಕಾಗಿ ಯಾವುದೇ ಟೆಂಡರ್‌ ಕರೆದಿಲ್ಲ. ಟೆಂಡರ್‌ ಕರೆಯದೆ ಪೂಜಾ ಯೋಜನೆ ಕೈಗೊಂಡಿರುವುದು ಬರದ ನೆಪದಲ್ಲಿ ಭ್ರಷ್ಟಾಚಾರ ಮಾಡುವ ಉದ್ದೇಶದಿಂದ ಎಂಬುದು ಸ್ಪಷ್ಟವಾಗುತ್ತದೆ ಎಂದು ದೂರುದಾರರು ಆರೋಪಿಸಿದ್ದಾರೆ.
ರಾಘವೇಂದ್ರ ಎಂಬುವವರು ಶುಕ್ರವಾರ ಎಸಿಬಿಗೆ ದೂರು ನೀಡಿದ್ದಾರೆ. ಎಂ.ಬಿ.ಪಾಟೀಲ್ ಅವರ ಸೂಚನೆಯಂತೆ ಕರ್ನಾಟಕ ನೀರಾವರಿ ನಿಗಮವು ಪರ್ಜನ್ಯ ಹೋಮ ಆಯೋಜಿಸಿದೆ. ಮಳೆಗಾಗಿ ಬೊಕ್ಕಸದಿಂದ ರೂ.20 ಲಕ್ಷ ವೆಚ್ಚ ಮಾಡಿ ಕೇರಳದ ಮಂತ್ರವಾದಿಗಳಿಂದ ಭಾಗಮಂಡಲ ಮತ್ತು ಮಹಾಬಲೇಶ್ವರದಲ್ಲಿ ಹೋಮ ಮಾಡಿಸಲು ಕ್ರಮ ಕೈಗೊಂಡಿದ್ದಾರೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ಭ್ರಷ್ಟಾಚಾರ ಎಸಗಿದ್ದಾರೆ. ಹೀಗಾಗಿ ಈ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪೂಜೆಗೆ ರೂ.20 ಲಕ್ಷ ಮೀಸಲಿರಿಸಿರುವ ಬಗ್ಗೆ ಸಚಿವರು ಒಪ್ಪಿಕೊಂಡಿದ್ದಾರೆ. ಇದಕ್ಕಾಗಿ ಯಾವುದೇ ಟೆಂಡರ್ ಕರೆದಿಲ್ಲ. ಟೆಂಡರ್ ಕರೆಯದೆ ಪೂಜಾ ಯೋಜನೆ ಕೈಗೊಂಡಿರುವುದು ಬರದ ನೆಪದಲ್ಲಿ ಭ್ರಷ್ಟಾಚಾರ ಮಾಡುವ ಉದ್ದೇಶದಿಂದ ಎಂಬುದು ಸ್ಪಷ್ಟವಾಗುತ್ತದೆ. ಮಾಧ್ಯಮಗಳಲ್ಲಿ ವರದಿ ಬಂದ ಬಳಿಕ ತಮ್ಮ ಮತ್ತು ಗೆಳೆಯರ ಹಣದಲ್ಲಿ ಪೂಜೆ ನಡೆಸಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ. ಇದರಿಂದ ಗೊಂದಲ ನಿರ್ಮಾಣವಾಗಿದೆ ಎಂದಿದ್ದಾರೆ.
