ಕಿರುತೆರೆ ನಟ ಕಿರಣ್ ರಾಜ್ ವಿರುದ್ಧ ಮತ್ತೊಂದು ದೂರು

First Published 5, May 2018, 7:18 AM IST
Complaint Against Kiran Raj
Highlights

ಕಿರುತೆರೆ ನಟ ಕಿರಣ್ ರಾಜ್ ಮೇಲೆ ಮತ್ತೊಂದು ದೂರು ದಾಖಲು ಮಾಡಲಾಗಿದೆ. ಈ ಹಿಂದೆ ಕಿರುಕುಳ ನೀಡಿದ್ದಾನೆಂದು ದೂರು ನೀಡಿದ್ದ ಯಾಸ್ಮೀನ್ ಎಂಬಾಕೆಯಿಂದ ಮತ್ತೊಂದು ದೂರು ದಾಖಲಾಗಿದೆ. 

ಬೆಂಗಳೂರು :  ಕಿರುತೆರೆ ನಟ ಕಿರಣ್ ರಾಜ್ ಮೇಲೆ ಮತ್ತೊಂದು ದೂರು ದಾಖಲು ಮಾಡಲಾಗಿದೆ. ಈ ಹಿಂದೆ ಕಿರುಕುಳ ನೀಡಿದ್ದಾನೆಂದು ದೂರು ನೀಡಿದ್ದ ಯಾಸ್ಮೀನ್ ಎಂಬಾಕೆಯಿಂದ ಮತ್ತೊಂದು ದೂರು ದಾಖಲಾಗಿದೆ. 

ಫಿಲ್ಮ್ ಇಂಡಸ್ಟ್ರಿಯಲ್ಲಿ ಒಳ್ಳೆ ಅವಕಾಶ ಕೊಡಿಸುತ್ತೇನೆ ಎಂದು ಪಾಸ್ ಪೋರ್ಟ್ ಪಡೆದಿದ್ದ ಕಿರಣ್ ರಾಜ್, ಇದೀಗ ಆಕೆಯ ಪಾಸ್ ಪೋರ್ಟ್ ನೀಡದೆ  ಆತನ‌ ಕುಟುಂಬದೊಂದಿಗೆ ಸೇರಿ ಕಿರುಕುಳ ನೀಡುತ್ತಿರುವುದಾಗಿ ಆರೋಪ ಮಾಡಿದ್ದಾರೆ.

ಪಾಸ್ ಪೋರ್ಟ್ ವಾಪಸ್ ಕೇಳಿದ್ದಕ್ಕೆ ಹಣದ ಬೇಡಿಕೆ ಇಟ್ಟು ಜೀವ ಬೆದರಿಕೆ ಹಾಕಿದ್ದಾರೆ. ವಿದೇಶಕ್ಕೆ ಚಿತ್ರೀಕರಣಕ್ಕೆಂದು ತೆರಳಲು ಪಾಸ್ ಪೋರ್ಟ್ ಕೇಳಿದ್ದು, ಕಿರಣ್ ರಾಜ್ ಪಾಸ್ ಪೋರ್ಟ್ ವಾಪಸ್ ನೀಡದ  ಹಿನ್ನೆಲೆ ಕೆಲಸ ಕೈ ತಪ್ಪಿದೆ ಎಂದು ಯಾಸ್ಮಿನ್ ದೂರು ನೀಡಿದ್ದಾರೆ. 

ಕಿರಣ್ ರಾಜ್ ವಿರುದ್ಧ 420,506,384  ಸೆಕ್ಷನ್ ನಡಿ ರಾಜರಾಜೇಶ್ವರಿ ನಗರದಲ್ಲಿ ಪ್ರಕರಣ ದಾಖಲಾಗಿದೆ.

loader