ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ, ಪತ್ನಿ ವಿರುದ್ಧ ದೂರು

Complaint Against Former Cricketer Vinod Kambli
Highlights

  • ಗಾಯಕನ ತಂದೆ ಮೇಲೆ ಕಾಂಬ್ಳಿ ದಂಪತಿ ಹಲ್ಲೆ?
  • ಪತ್ನಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ: ಕಾಂಬ್ಳಿ ಪ್ರತಿದೂರು

ಮುಂಬೈ: ಗಾಯಕ ಅಂಕಿತ್ ತಿವಾರಿ ತಂದೆ ಆರ್.ಕೆ. ತಿವಾರಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಮತ್ತು ಪತ್ನಿ ಆ್ಯಂಡ್ರಿಯಾ ವಿರುದ್ಧ ಇಲ್ಲಿನ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಇದಕ್ಕೆ ಪ್ರತಿದೂರು ದಾಖಲಿಸಿರುವ ಕಾಂಬ್ಳಿ, ‘ಆರ್.ಕೆ.ತಿವಾರಿ ನನ್ನ ಪತ್ನಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ’ ಎಂದಿದ್ದಾರೆ. 

ಈ ಕುರಿತು ಪ್ರತಿಕ್ರಿಯಿಸಿರುವ ಕಾಂಬ್ಳಿ, ‘ಮಾಲ್‌ನಲ್ಲಿ ಆರ್. ಕೆ.ತಿವಾರಿ ಅನುಚಿತವಾಗಿ ವರ್ತಿಸುವ ವೇಳೆಯೇ ಸಿಕ್ಕಿಬಿದ್ದರು. ಆಗ ನನ್ನ ಪತ್ನಿ ತಿವಾರಿಯನ್ನು ತಳ್ಳಿದರು. ಆಗ

ತಿವಾರಿ ಪಕ್ಕದಲ್ಲಿದ್ದ ಇಬ್ಬರು ವ್ಯಕ್ತಿಗಳು ನನ್ನ ಪತ್ನಿ ಮೇಲೆ ಹಲ್ಲೆ ನಡೆಸಲು ಬಂದರು’ ಎಂದು ಆರೋಪಿಸಿದ್ದಾರೆ.

loader