Asianet Suvarna News Asianet Suvarna News

ಸರ್ಕಾರ ಚಾಪೆ ಕೆಳಗೆ, ಉದ್ಯಮಿಗಳು ರಂಗೋಲಿ ಕೆಳಗೆ: GSTಯಿಂದ ಪಾರಾಗಲು ಕಂಪೆನಿಗಳ ಕಳ್ಳದಾರಿ..!

ಒಂದು ದೇಶ ಒಂದು ತೆರಿಗೆ ಏಕರೂಪದ ಸರಕು ಮತ್ತು ಸೇವಾ ತೆರಿಗೆ ಜಾರಿಗೆ ತಂದಿದ್ದೇ ತೆರಿಗೆಗಳ್ಳರನ್ನು ಪತ್ತೆ ಹಚ್ಚಿ ಸದೆಬಡಿಯಲು. ಆದರೆ, GST ಬಂದಮೇಲೆ ತೆರಿಗೆ ಕಳ್ಳರು ಅಡ್ಡದಾರಿ ಹಿಡಿಯುತ್ತಿದ್ದಾರೆ. ಜನರ ಬಳಿ ಜಿಎಸ್ ಟಿ ಹೆಸರಲ್ಲಿ ಸುಲಿಗೆ ಮಾಡುತ್ತಾ ಸರ್ಕಾರಕ್ಕೂ ಮೋಸ ಮಾಡುತ್ತಿದ್ದಾರೆ. ಯಾವ ರೀತಿ ಸುಲಿಗೆ ಮಾಡುತ್ತಿದ್ದಾರೆ ಅಂತ ತಿಳಿದುಕೊಳ್ಳಬೇಕು?

Companies Discovered New Ways To Escape From GST

ನವದೆಹಲಿ(ಜು.14): ಒಂದು ದೇಶ ಒಂದು ತೆರಿಗೆ ಏಕರೂಪದ ಸರಕು ಮತ್ತು ಸೇವಾ ತೆರಿಗೆ ಜಾರಿಗೆ ತಂದಿದ್ದೇ ತೆರಿಗೆಗಳ್ಳರನ್ನು ಪತ್ತೆ ಹಚ್ಚಿ ಸದೆಬಡಿಯಲು. ಆದರೆ, GST ಬಂದಮೇಲೆ ತೆರಿಗೆ ಕಳ್ಳರು ಅಡ್ಡದಾರಿ ಹಿಡಿಯುತ್ತಿದ್ದಾರೆ. ಜನರ ಬಳಿ ಜಿಎಸ್ ಟಿ ಹೆಸರಲ್ಲಿ ಸುಲಿಗೆ ಮಾಡುತ್ತಾ ಸರ್ಕಾರಕ್ಕೂ ಮೋಸ ಮಾಡುತ್ತಿದ್ದಾರೆ. ಯಾವ ರೀತಿ ಸುಲಿಗೆ ಮಾಡುತ್ತಿದ್ದಾರೆ ಅಂತ ತಿಳಿದುಕೊಳ್ಳಬೇಕು?

ಭಾರತದ ದೇಶಾದ್ಯಂತ ಏಕ ರೂಪ ತೆರಿಗೆ ವ್ಯವಸ್ಥೆ ಜಾರಿಗೆ ಬಂದಿದೆ. ಸರಕು ಮತ್ತು ಸೇವಾ ತೆರಿಗೆಯ ಬಿಸ ಜನಸಾಮಾನ್ಯರಿಗೆ ಮಾತ್ರವಲ್ಲ.. ಕಂಪನಿಗಳಿಗೂ ತಟ್ಟಿದೆ. ಇದರಿಂದ ಪಾರಾಗಲು ಕೆಲ ಕಂಪನಿಗಳು ವಾಮಮಾರ್ಗಗಳನ್ನು ಹುಡುಕಿಕೊಂಡಿವೆ.

ತೆರಿಗೆ ಕಳ್ಳರ ಹೊಸ ದಾರಿ..!

ಕೆಲವೊಂದು ಕಂಪೆನಿಗಳು ವರ್ಷಕ್ಕೆ 50 ರಿಂದ 200 ಕೋಟಿ ವಹಿವಾಟು ನಡೆಸುತ್ತವೆ. ಹೀಗಾಗಿ  GSTಯಿಂದ ಪಾರಾಗೋದು ಕಷ್ಟ ಸಾಧ್ಯ. ಉತ್ಪಾದಿತ ವಸ್ತುಗಳನ್ನು ಸ್ಥಳೀಯವಾಗಿ ಮಾರಾಟ ಮಾಡಿದರೆ ಶೇಕಡಾ 28ರಷ್ಟು ತೆರಿಗೆ ವ್ಯಾಪ್ತಿಗೆ ಒಳಪಡುತ್ತವೆ. ಹೀಗಾಗಿ ಹಲವು ಕಂಪನಿಗಳು ಕಳ್ಳ ದಾರಿ ಹುಡುಕಿದ್ದು GSTಗೆ ತಕ್ಕಂತೆ ತಮ್ಮ  ಕಾರ್ಯಚಟುವಟಿಕೆಗಳನ್ನು ಬದಲಾವಣೆಗೆ ಮುಂದಾಗಿವೆ. ವರ್ಷಕ್ಕೆ 50 ರಿಂದ 200 ಕೋಟಿ ವಹಿವಾಟು ನಡೆಸುವ ಕಂಪನಿಗಳು ಮೊದ್ಲಿಗೆ ಶೆಲ್ ಕಂಪನಿಗಳನ್ನ ಆರಂಭಿಸುತ್ತಿವೆ.

ಈ ಶೆಲ್ ಕಂಪನಿಗಳು ಹೊರರಾಜ್ಯಗಳಲ್ಲಿ ವ್ಯವಹಾರ ನಡೆಸಿ ಲಾಭ ಪಡೆಯಲು ಮುಂದಾಗುತ್ತವೆ. ಅಂದರೆ ಅಂತರ್ ​​​ರಾಜ್ಯಗಳಲ್ಲಿ ವಹಿವಾಟು ನಡೆಸಿ ಲಾಭ ಪಡೆದು ತೆರಿಗೆ ಲೆಕ್ಕ ಕೊಡುವ ಮುನ್ನವೇ ಕ್ಲೋಸ್ ಆಗುತ್ತವೆ. ಅಲ್ಲದೇ, ಉದ್ಯಮಿಗಳು, ಲೇವಾದೇವಿಗಾರರು ಪುನರಾವರ್ತಿಸಬಹುದಾದ ಕೆಲವೊಂದು ಟ್ರಿಕ್ಸ್​ಗಳನ್ನ ಬಳಸುತ್ತಾರೆ. ಅಂದ್ರೆ ಕೃತಕ ಆಭರಣ ತಯಾರಕನಂತೆ ತೆರಿಗೆ ಮೋಸ ಮಾಡೋದು ಅಂತ ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಸಲಿಗೆ ಶೆಲ್ ಕಂಪನಿಗಳು ಮೊದಲು ಸರಕುಗಳನ್ನ ಹೊರ ರಾಜ್ಯಕ್ಕೆ ಮಾರುತ್ತವೆ. ಬಳಿಕ ತಮ್ಮ ರಾಜ್ಯದಲ್ಲಿ ಶೇ.18 GSTಯೊಂದಿಗೆ ಮತ್ತೊಮ್ಮೆ ಮಾರಾಟ ಮಾಡುತ್ತವೆ. ಹೀಗೆ ಎರೆಡೆರೆಡು ಬಾರಿ ವಹಿವಾಟು ನಡೆಸಿ ಉತ್ಪನ್ನಗಳ ಬಗ್ಗೆ ಸುಳ್ಳು ಹೇಳಿ ಉದ್ಯಮಿಗಳು ತೆರಿಗೆಯಿಂದ ನುಣುಚಿಕೊಳ್ತಾರೆ.. ಒಟ್ನಲ್ಲಿ ಕೆಲವು ಕಂಪನಿಗಳು ಜಿಎಸ್ಟಿಗೆ ತಕ್ಕಂತೆ ತಮ್ಮ ಕಾರ್ಯ ಚಟುವಟಿಕೆಗಳ ಬದಲಾವಣೆಗೆ ಮುಂದಾಗಿವೆ. ಇದರ ಬೆನ್ನಲ್ಲೇ ಸರ್ಕಾರದ ಕಣ್ಣಿಗೆ ಮಣ್ಣೆರಚಿ ರಂಗೋಲಿ ಕೆಳಗೆ ತೂರುವ ಹುನ್ನಾರ ಮಾಡುತ್ತಿರುವುದಂತೂ ನಿಜ.

 

Follow Us:
Download App:
  • android
  • ios