ಶೀಘ್ರ ಮೆಡಿಕಲ್ ಶಾಪ್‌ನಲ್ಲಿ ಕೊಕಾ ಕೋಲಾ ಉತ್ಪನ್ನಗಳು ಲಭ್ಯ

First Published 5, May 2018, 9:20 AM IST
Cokes nutrition drinks soon at chemist shops
Highlights

ಶೀಘ್ರದಲ್ಲೇ ಮೆಡಿಕಲ್ ಶಾಪ್‌ಗಳಲ್ಲಿ ಕೋಕಾ ಕೋಲಾದ ಪೌಷ್ಟಿಕಾಂಶ ಉತ್ಪನ್ನಗಳು ಲಭ್ಯವಾಗಲಿವೆ.  ಮುಂದಿನ 2 ತಿಂಗಳಲ್ಲಿ ಉತ್ಪನ್ನ ಗಳು ಎಲ್ಲ ಔಷಧಿ ಅಂಗಡಿಗಳಲ್ಲಿ ಲಭಿಸಲಿವೆ ಎಂದು ಮೂಲಗಳು ತಿಳಿಸಿವೆ.

ನವದೆಹಲಿ: ಶೀಘ್ರದಲ್ಲೇ ಮೆಡಿಕಲ್ ಶಾಪ್‌ಗಳಲ್ಲಿ ಕೋಕಾ ಕೋಲಾದ ಪೌಷ್ಟಿಕಾಂಶ ಉತ್ಪನ್ನಗಳು ಲಭ್ಯವಾಗಲಿವೆ. 

ಮುಂದಿನ 2 ತಿಂಗಳಲ್ಲಿ ಉತ್ಪನ್ನ ಗಳು ಎಲ್ಲ ಔಷಧಿ ಅಂಗಡಿಗಳಲ್ಲಿ ಲಭಿಸಲಿವೆ ಎಂದು ಮೂಲಗಳು ತಿಳಿಸಿವೆ. ಅಕ್ವಾರಿಯಸ್ ಗ್ಲೂಕೊಚಾರ್ಜ್ ಮತ್ತು ಮಿನಿಟ್ ಮೇಡ್ ವಿಟಿಂ ಗೊ ಎಂಬ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಬಗ್ಗೆ ಕಂಪೆನಿ ಘೋಷಿಸಿದೆ.

ವಿಶೇಷವೆಂದರೆ ಶತಮಾನದ ಹಿಂದೆ ಮೊಟ್ಟಮೊದಲ ಬಾರಿಗೆ ಕೋಕಾ ಕೋಲಾವನ್ನು ಸಿರಪ್ ಎಂದು ತಯಾರಿಸ ಲಾಗಿತ್ತು. ಅದನ್ನು ಆಗ ಮೆಡಿಕಲ್ ಶಾಪ್‌ಗಳಲ್ಲೇ ಮಾರಾಟ ಮಾಡಲಾಗುತ್ತಿತ್ತು. ನಂತರ ಅದಕ್ಕೆ ತಂಪು ಪಾನೀಯದ ರೂಪ ನೀಡಲಾಯಿತು.

loader