ಬೆಂಗಳೂರು [ಜು.31]: ಗುಜರಾತ್‌ ಮೂಲದವರಾದ ಮಹೇಂದ್ರ ಕಂಪಾನಿ ಅವರಿಗೆ ಸಿದ್ಧಾರ್ಥ ಅತ್ಯಂತ ಆತ್ಮೀಯರಾಗಿಬಿಟ್ಟರು. ಅದಕ್ಕೆ ಕಾರಣವೂ ಇತ್ತು. 

ಸಿದ್ಧಾರ್ಥ ಬೆಳಗ್ಗೆ 7ಕ್ಕೆಲ್ಲಾ ಕಚೇರಿಗೆ ಹಾಜರಾಗುತ್ತಿದ್ದರು. ಮಹೇಂದ್ರ ಕಂಪಾನಿ ಅವರು ಕಚೇರಿಯಿಂದ ಮನೆಗೆ ಹೋಗುವುದು ರಾತ್ರಿ 9 ಗಂಟೆಯಾಗುತ್ತಿತ್ತು. ಅಲ್ಲಿವರೆಗೂ ಅವರ ಜತೆಯೇ ಇರುತ್ತಿದ್ದರು. 

ಅವರ ಕಾರಿನವರೆಗೆ ಫೈಲ್‌ಗಳು ಹಾಗೂ ಊಟದ ಡಬ್ಬಿ ತಂದುಕೊಡುವ ಕೆಲಸವನ್ನೂ ಮಾಡಿದ್ದರು. ಚಿಕ್ಕಮಗಳೂರಿನ ಕಾಫಿ ತೋಟದ ಒಡೆಯ ಎಂಬ ಹಮ್ಮು-ಬಿಮ್ಮು ಬಿಟ್ಟು ಅವರು ಮಾಡಿದ ಕೆಲಸ ಕಂಪಾನಿ ಅವರ ವಿಶ್ವಾಸ ವಲಯಕ್ಕೆ ತಂದುಬಿಟ್ಟಿತು. 

ಷೇರುಪೇಟೆಯ ಪ್ರತಿಯೊಂದು ವ್ಯವಹಾರ, ಹೂಡಿಕೆ ಮಾಡುವಾಗ ವಹಿಸಬೇಕಾದ ಎಚ್ಚರ ಸೇರಿದಂತೆ ತಮಗೆ ಗೊತ್ತಿದ್ದ ಎಲ್ಲ ವಿಷಯಗಳನ್ನೂ ಕಂಪಾನಿ ಅವರು ಸಿದ್ಧಾರ್ಥ ಅವರಿಗೆ ಸೂಕ್ಷ್ಮವಾಗಿ ಅರ್ಥ ಮಾಡಿಸಿಕೊಟ್ಟರು. 2 ವರ್ಷ ಅಲ್ಲಿದ್ದು ಕಂಪಾನಿ ಅವರಿಗೆ ಹೇಳಿ ಸಿದ್ಧಾರ್ಥ ಬೆಂಗಳೂರಿಗೆ ಬಂದು ದೊಡ್ಡ ಉದ್ಯಮಿಯಾಗಿ ಬೆಳೆದರು.