ಉರಗ ತಜ್ಞ ಸ್ನೇಕ್ ಕಿರಣ್`ಗೆ ನಾಗರಹಾವು ಕಚ್ಚಿ ಆಸ್ಪತ್ರೆಗೆ ದಾಖಲು

ಶಿವಮೊಗ್ಗ(ಸೆ.20): ಶಿವಮೊಗ್ಗದ ಉರಗ ತಜ್ಞ ಸ್ನೇಕ್ ಕಿರಣ್`ಗೆ ನಾಗರಹಾವು ಕಚ್ಚಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೋಟೆ ರಸ್ತೆಯಲ್ಲಿ ಹಾವು ಹಿಡಿಯುತ್ತಿದ್ದಾಗ ನಾಗರಹಾವು ಕಚ್ಚಿ ಕಿರಣ್ ತೀವ್ರ ಅಸ್ವಸ್ಥಗೊಂಡರು. ಶಿವಮೊಗ್ಗ ಸುತ್ತಮುತ್ತ ನೂರಾರು ವಿಷಸರ್ಪಗಳನ್ನ ಹಿಡಿದು ಸಂರಕ್ಷಿಸಿದ್ದರು. ಆದರೆ, ನಿನ್ನೆ ಕಿರಣ್ ಗ್ರಹಚಾರ ಸರಿ ಇರಲಿಲ್ಲ ಅನ್ನಿಸುತ್ತೆ. ನಾಗರಹಾವು ಕಚ್ಚಿ ವಿಷವೇರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇದುವರೆಗೆ ಸ್ನೇಕ್ ಕಿರಣ್ 10 ಸಾವಿರಕ್ಕೂ ಅಧಿಕ ಹಾವನ್ನ ಹಿಡಿದಿದ್ರು. ಕಳೆದೆರಡು ಬಾರಿ ಹಾವಿನಿಂದ ಕಚ್ಚಿಸಿಕೊಂಡಿದ್ದರೂ ಪಾರಾಗಿದ್ದರು.