ಮೈಸೂರು[ಸೆ.09]: ಯಾರನ್ನು ಯಾವಾಗ ಉಪಮುಖ್ಯಮಂತ್ರಿ ಮಾಡಬೇಕು, ಎಷ್ಟುಉಪಮುಖ್ಯಮಂತ್ರಿಗಲನ್ನು ನೇಮಿಸಬೇಕು ಎಂಬುದು ಮುಖ್ಯಮಂತ್ರಿಗಳಿಗೆ ಬಿಟ್ಟವಿಷಯ. ರಾಜ್ಯದಲ್ಲಿ ಮತ್ತಿಬ್ಬರು ಡಿಸಿಎಂ ಹುದ್ದೆ ಸೃಷ್ಟಿಸುವ ಕುರಿತು ನನಗೇನೂ ಗೊತ್ತಿಲ್ಲ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

ಮೈಸೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರನ್ನು ಡಿಸಿಎಂ ಮಾಡಬೇಕು ಎಂಬುದು ಮುಖ್ಯಮಂತ್ರಿಗಳಿಗೆ ಗೊತ್ತು. ಅದು ಅವರ ಪರಮಾಧಿಕಾರ. ಡಿಸಿಎಂ ಹುದ್ದೆ ನನಗೆ ಬಯಸದೇ ಬಂದ ಭಾಗ್ಯ ಎಂದರು.