ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ವಪಕ್ಷ ನಿಯೋಗ  ಪ್ರಧಾನಿ ನರೇಂದ್ರ ಮೋದಿ ಜೊತೆ ಭೇಟಿ ಮುಕ್ತಾಯವಾಗಿದೆ.

ಬೆಂಗಳೂರು (ಡಿ. 30): ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ವಪಕ್ಷ ನಿಯೋಗ ಪ್ರಧಾನಿ ನರೇಂದ್ರ ಮೋದಿ ಜೊತೆ ಭೇಟಿ ಮುಕ್ತಾಯವಾಗಿದೆ.

ಕೇಂದ್ರದಿಂದ ರಾಜ್ಯಕ್ಕೆ 4702 ಕೋಟಿ ರೂ. ಬರ ಪರಿಹಾರ ಕೇಳಿದ್ದೇವೆ. ರಾಜ್ಯದ 133 ತಾಲೂಕುಗಳಲ್ಲಿ ಭೀಕರ ಬರ ಪರಿಸ್ಥಿತಿ ಇದೆ. 37 ಲಕ್ಷ ರೈತರು ತೊಂದರೆಗೀಡಾಗಿದ್ದಾರೆ ಎಂದು ಪ್ರಧಾನಿ ಮೋದಿಗೆ ಮನವರಿಕೆ ಮಾಡಿದ್ದೇವೆ ಎಂದು ಭೇಟಿ ಬಳಿಕ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಜ. 4ರಂದು ನಡೆಯುವ ಸಭೆಯಲ್ಲಿ ಬರ ಪರಿಹಾರ ಕುರಿತು ನಿರ್ಧಾರವಾಗಲಿದೆ. ಗೃಹ ಸಚಿವ ರಾಜನಾಥ್​ ಸಿಂಗ್​, ಕೃಷಿ ಸಚಿವರ ನೇತೃತ್ವದ ಸಮಿತಿ ಬರ ಪರಿಹಾರ ಕುರಿತು ನಿರ್ಧರಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

2 ಸದನಗಳ ನಿರ್ಣಯದಂತೆ ಇನ್ನೂ ಬಗೆಹರಿಯದ ಮಹಾದಾಯಿ ವಿಚಾರದಲ್ಲಿ ಪ್ರಧಾನಿ ಮಧ್ಯಪ್ರವೇಶಕ್ಕೆ ಮನವಿ ಮಾಡಿದ್ದೇವೆ. ಪ್ರಧಾನಿ ಮೋದಿ ಎಲ್ಲವನ್ನೂ ಕೇಳಿದ್ದಾರೆ, ನೋಡೋಣ ಎಂದಿದ್ದಾರೆ ಎಂದು ದೆಹಲಿಯ ಕರ್ನಾಟಕ ಭವನದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.