ಕನಕದಾಸರು ಸಮಾಜದ ಒಳಿತಿಗಾಗಿ ಬದುಕಿದವರು. ಅಂತಹ ಕನಕದಾಸರ ಜಯಂತಿ ಮಾಡುವುದು ನಮ್ಮ ಕರ್ತವ್ಯ. ಆದರೆ ಇದನ್ನು ಕೂಡ ರಾಜಕೀಯವಾಗಿ ಕಾಮಲೆ ಕಣ್ಣಿನಿಂದ ನೋಡುವವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಇವರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸಿ ಕಾರ್ಯಕ್ರಮ ಮಾಡುವುದಲ್ಲ. ರಾಜ್ಯದ ಎಲ್ಲ ಜನರ ಪರವಾಗಿ ಗೌರವಿಸುವ ಕೆಲಸ ಎಂದು ಕನಕ ಜಯಂತಿ ಭಾಷಣದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು (ನ.06): ಕನಕದಾಸರು ಸಮಾಜದ ಒಳಿತಿಗಾಗಿ ಬದುಕಿದವರು. ಅಂತಹ ಕನಕದಾಸರ ಜಯಂತಿ ಮಾಡುವುದು ನಮ್ಮ ಕರ್ತವ್ಯ. ಆದರೆ ಇದನ್ನು ಕೂಡ ರಾಜಕೀಯವಾಗಿ ಕಾಮಲೆ ಕಣ್ಣಿನಿಂದ ನೋಡುವವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಇವರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸಿ ಕಾರ್ಯಕ್ರಮ ಮಾಡುವುದಲ್ಲ. ರಾಜ್ಯದ ಎಲ್ಲ ಜನರ ಪರವಾಗಿ ಗೌರವಿಸುವ ಕೆಲಸ ಎಂದು ಕನಕ ಜಯಂತಿ ಭಾಷಣದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
1988 ರಲ್ಲಿ ಕನಕದಾಸರ 500 ನೇ ಜಯಂತಿಯನ್ನು ನಾನು ಸಾರಿಗೆ ಸಚಿವನಾಗಿದ್ದಾಗ ಆಚರಿಸಿ ಇಡೀ ವರ್ಷ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ಆಗ ಕನಕದಾಸರ ಕೃತಿಗಳನ್ನು ಕಡಿಮೆ ಬೆಲೆಗೆ ಜನರಿಗೆ ತಲುಪಿಸಿದ್ದೆವು. ಕನಕ ಗುರುಪೀಠ ಸ್ಥಾಪನೆಯಾಗಲೂ ಕೂಡ ಆ ಐನೂರನೇ ಜಯಂತಿ ಕಾರ್ಯಕ್ರಮ ಕಾರಣ. ಕನಕ ಗುರುಪೀಠ ಕೇವಲ ಕುರುಬರಿಗೆ ಸೀಮಿತವಾಗಿ ಮಾಡಿದ್ದಲ್ಲ. ಧರ್ಮ ಜಡತ್ವಕ್ಕೆ ಒಳಗಾದಾಗ ಅದಕ್ಕೆ ಚಾಲನೆ ನೀಡುವ ಕೆಲಸ ಮಾಡಿದ್ದು ಈ ದಾರ್ಶನಿಕರು. 12 ನೇ ಶತಮಾನದಲ್ಲಿ ಬಸವಣ್ಣ ಕೂಡ ಅದೇ ಕೆಲಸ ಮಾಡಿದ್ದರು. ನಮ್ಮ ಜಾತಿ ವ್ಯವಸ್ಥೆ ಚಲನರಹಿತ ಆಗಿರುವುದರಿಂದಲೇ ಜಾತಿ ವ್ಯವಸ್ಥೆ ಇನ್ನೂ ಹಾಗೇ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಜಾತಿ ವ್ಯವಸ್ಥೆ ಸುಲಭವಾಗಿ ಹೋಗಲ್ಲ, 800 ವರ್ಷಗಳಿಂದ ಹೇಳುತ್ತಲೇ ಇದ್ದೇವೆ, ಆದರೂ ಸುಧಾರಣೆ ಕಾಣುತ್ತಿಲ್ಲ. ಯಾರು ಬದಲಾವಣೆಯ ಪರವಾಗಿದ್ದಾರೆ? ಯಾರು ಬದಲಾವಣೆಯ ವಿರುದ್ಧ ಇದ್ದಾರೆ ಅನ್ನೋದನ್ನ ನಾವು ಗುರುತಿಸಿಕೊಳ್ಳಬೇಕಿದೆ. ಈಗ ಪರಿವರ್ತನೆ ಮಾಡ್ತೀವಿ ಅಂತ ಹೊರಟಿದ್ದಾರೆ. ಏನು ಪರಿವರ್ತನೆ ಮಾಡ್ತಾರೋ ನಮಗಂತೂ ಗೊತ್ತಿಲ್ಲ. ಕೋಮುವಾದ ಬದಲಾಗಬೇಕಿದೆ. ಆದರೆ ಇವರೇನು ಪರಿವರ್ತನೆ ಮಾಡ್ತಾರೋ ನನಗಂತೂ ಗೊತ್ತಿಲ್ಲ ಎಂದು ಬಿಜೆಪಿಯ ಪರಿವರ್ತನಾ ರ್ಯಾಲಿಯ ಬಗ್ಗೆ ಸಿಎಂ ವ್ಯಂಗ್ಯವಾಡಿದ್ದಾರೆ. ಸಿಎಂ ಸಿದ್ದರಾಮಯ್ಯ
ಸಿದ್ದರಾಮಯ್ಯ ಜೆಡಿಎಸ್'ನೂ ಕೂಡಾ ಬಿಟ್ಟಿಲ್ಲ. ಇನ್ನು ಕೆಲವರು ಕುಮಾರಪರ್ವ ಅಂತ ಹೊರಟಿದ್ದಾರೆ. ಅದೇನು ಕುಮಾರಪರ್ವವೋ ನಮಗೆ ಗೊತ್ತಿಲ್ಲ. ನಮ್ಮದ್ದೇನಿದ್ದರೂ ಸಾಧನಾ ಪರ್ವ ಅಷ್ಟೇ. ನಾವು ನುಡಿದಂತೆ ನಡೆದಿದ್ದೇವೆ. ಜನ ಮತ್ತೆ ನಮಗೆ ಆಶೀರ್ವಾದ ಮಾಡುವ ನಂಬಿಕೆ ಇದೆ. ಟಿಪ್ಪು ಜಯಂತಿ ಕೂಡ ಈಗ ಕಾಂಟ್ರವರ್ಸಿ ಮಾಡಲು ಹೊರಟಿದ್ದಾರೆ. ಅದಕ್ಕೆ ನಾನು ಹೇಳಿದ್ದು ಕಾಮಾಲೆ ಕಣ್ಣಿಂದ ನೋಡಬಾರದು ಅಂತ ಎಂದು ಟಾಂಗ್ ನೀಡಿದ್ದಾರೆ.
