ಮದ್ಯಪಾನ ನಿಷೇಧದ ಬಗ್ಗೆ ವಿಧಾನಸಭಾ ಕಲಾಪದಲ್ಲಿ ಸಿಟಿ ರವಿ ಎತ್ತಿದ ಪ್ರಶ್ನೆಗೆ ಸಿಎಂ ತಮಾಷೆಯಾಗಿ ಉತ್ತರಿಸಿದ್ದಾರೆ. ಸಿ ಟಿ ರವಿ, ಸಿಎಂ ನಡುವಿನ ಮಾತುಕತೆ ತಮಾಷೆಯಾಗಿದೆ. ಬಿಜೆಪಿಯವರಿಗೆ ಒಳ್ಳೆ ಬುದ್ದಿ ಬಂದಿದೆ. ಮದ್ಯಪಾನ ನಿಷೇಧ ಮಾಡಿ ಅಂತಿದ್ದಾರೆ ಎಂದು ಸಿಎಂ ಕಾಲೆಳೆದಿದ್ದಾರೆ.
ಬೆಳಗಾವಿ (ನ.21): ಮದ್ಯಪಾನ ನಿಷೇಧದ ಬಗ್ಗೆ ವಿಧಾನಸಭಾ ಕಲಾಪದಲ್ಲಿ ಸಿಟಿ ರವಿ ಎತ್ತಿದ ಪ್ರಶ್ನೆಗೆ ಸಿಎಂ ತಮಾಷೆಯಾಗಿ ಉತ್ತರಿಸಿದ್ದಾರೆ. ಸಿ ಟಿ ರವಿ, ಸಿಎಂ ನಡುವಿನ ಮಾತುಕತೆ ತಮಾಷೆಯಾಗಿದೆ. ಬಿಜೆಪಿಯವರಿಗೆ ಒಳ್ಳೆ ಬುದ್ದಿ ಬಂದಿದೆ. ಮದ್ಯಪಾನ ನಿಷೇಧ ಮಾಡಿ ಅಂತಿದ್ದಾರೆ ಎಂದು ಸಿಎಂ ಕಾಲೆಳೆದಿದ್ದಾರೆ.
ಸಾರಾಯಿ ನಿಷೇಧ ಮಾಡಿದ್ದು ನಾವು ಎಂದು ಸಿಟಿ ರವಿ ಹೇಳಿದಾಗ, ನೀವು ಸಾರಾಯಿ ನಿಷೇಧ ಮಾಡಿದ್ರಿ, ಮದ್ಯಪಾನವನ್ನಲ್ಲ. ಸಾರಾಯಿ ನಿಷೇಧದಿಂದ ಭ್ರಷ್ಟಾಚಾರ ಹೆಚ್ಚಾಗಿದೆ. ಆಗ 12 ರೂಪಾಯಿ ಕೊಟ್ಟು ಒಂದು ಪಾಕೆಟ್ ಕುಡಿಯುತ್ತಿದ್ದರು.ಈಗ ಒಂದು ಕ್ವಾಟರ್'ಗೆ 70 ರೂಪಾಯಿ ಕೊಡಬೇಕು. ನೀವು ಮಾಡಿದ್ದು ಇದು. ಇದರಿಂದ ಬಡವರಿಗೆ ಬಹಳ ಅನುಕೂಲವಾಗಿದೆ ಎಂದು ಸಿಎಂ ಬಿಜೆಪಿ ನಾಯಕರ ಕಾಲೆಳೆದಿದ್ದಾರೆ.
ಗುಜರಾತ್'ನಲ್ಲಿ ಬಿಜೆಪಿ ಸರ್ಕಾರವಿದೆ. ಅಲ್ಲಿ ನೋಡಿಕೊಂಡು ಬಂದು ನನಗೆ ಹೇಳಿ. ಯುಪಿ, ಗುಜರಾತ್,ಮಧ್ಯಪ್ರದೇಶದಲ್ಲಿ ಮೊದಲು ಮದ್ಯಪಾನ ನಿಷೇಧ ಮಾಡಿಸಿ. ಮದ್ಯಪಾನ ನಿಷೇಧದ ಬಗ್ಗೆ ನ್ಯಾಷನಲ್ ಲೆವೆಲ್'ನಲ್ಲಿ ಪಾಲಿಸಿ ಆಗಬೇಕು. ಮೋದಿ ಬಳಿ ಹೋಗಿ ಪಾಲಿಸಿ ಮಾಡೋಕೆ ಹೇಳಿ. ಇದಕ್ಕೆ ನಾವೂ ಬೆಂಬಲ ಕೊಡ್ತೀವಿ ಎಂದು ಸಿಎಂ ಹೇಳಿದ್ದಾರೆ.
ಸಮ್ಮಿಶ್ರ ಸರ್ಕಾರದಲ್ಲಿ ಸಾರಾಯಿ ನಿಷೇಧ ಆಯ್ತಾ ? ಆಗ ಬಿಎಸ್'ವೈ ಮತ್ತು ಕುಮಾರಸ್ವಾಮಿ ಏನು ಮಾತನಾಡಿಕೊಂಡಿದ್ರು ಅಂತ ನಿಮಗೆ ಗೊತ್ತಾ? ಎಂದು ಸಿಎಂ ಕೇಳಿದರು.
