ಇಲ್ಲಿ ನಡೆಯಲಿರುವ ಹೊಸ ರೈಲು ಮಾರ್ಗ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಜತೆ ವೇದಿಕೆ ಹಂಚಿಕೊಳ್ಳದಿರಲು ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ.
ಬೀದರ್ (ಅ.29): ಇಲ್ಲಿ ನಡೆಯಲಿರುವ ಹೊಸ ರೈಲು ಮಾರ್ಗ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಜತೆ ವೇದಿಕೆ ಹಂಚಿಕೊಳ್ಳದಿರಲು ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ.
ರೈಲ್ವೆ ಅಧಿಕಾರಿಗಳು ಕಾರ್ಯಕ್ರಮದ ಬಗ್ಗೆ ಚರ್ಚೆಯನ್ನೇ ನಡೆಸದೆ ಕೊನೆ ಗಳಿಗೆಯಲ್ಲಿ ಆಹ್ವಾನ ನೀಡಿರುವುದು ಸಿಎಂ ಅಸಮಾಧಾನಕ್ಕೆ ಕಾರಣ. ಸ್ವತಃ ಸಿಎಂ ಅವರೇ ಶನಿವಾರ ಸುದ್ದಿಗಾರರಿಗೆ ಈ ವಿಷಯ ಖಚಿತ ಪಡಿಸಿದರು. ''ರಾಜ್ಯದಲ್ಲಿ ಕೈಗೆತ್ತಿಕೊಳ್ಳುವ ರೈಲ್ವೆ ಯೋಜನೆಗಳ ಅನುದಾನದಲ್ಲಿ ರಾಜ್ಯ ಸರಕಾರ ಅರ್ಧ ಪಾಲು ಭರಿಸುತ್ತಿದೆ. ಜತೆಗೆ ಭೂಸ್ವಾಧೀನ ವೆಚ್ಚವನ್ನೂ ರಾಜ್ಯವೇ ಭರಿಸುತ್ತಿದೆ. ಆದರೂ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸುವಾಗ ನಮ್ಮೊಂದಿಗೆ ಮೊದಲೇ ಚರ್ಚೆಯನ್ನೂ ಮಾಡದೆ ಕೊನೆ ಗಳಿಗೆಯಲ್ಲಿ ಆಹ್ವಾನ ನೀಡಿದರೆ ಹೇಗೆ? ಪೂರ್ವನಿಗದಿತ ಕಾರ್ಯಕ್ರಮಗಳು ಇರುವ ಕಾರಣ ಆ ಕಾರ್ಯಕ್ರಮದಲ್ಲಿ ನಾನು ಪಾಲ್ಗೊಳ್ಳುತ್ತಿಲ್ಲ. ರಾಜ್ಯ ಸರಕಾರದ ಪ್ರತಿನಿಧಿಯಾಗಿ ಸಚಿವ ಆರ್.ವಿ.ದೇಶಪಾಂಡೆ ಪಾಲ್ಗೊಳ್ಳಲಿದ್ದಾರೆ,'' ಎಂದು ರೈಲ್ವೆ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
