ಸದಾ ಒಬ್ಬರನ್ನೊಬ್ಬರು ಕಾಲೆಳೆಯುತ್ತಾ ಇರುತ್ತಿದ್ದ ಸಿಎಂ ಸಿದ್ರಾಮಯ್ಯ ಹಾಗೂ ಸಂಸದ ಪ್ರತಾಪ್ ಸಿಂಹ ಇಂದು ದಸರಾ ಉದ್ಘಾಟನಾ ವೇದಿಕೆಯಲ್ಲಿ ಪರಸ್ಪರ ಮೆಚ್ಚುಗೆಯ ಮಾತುಗಳನ್ನಾಡಿದರು.
ಮೈಸೂರು (ಸೆ.21): ಸದಾ ಒಬ್ಬರನ್ನೊಬ್ಬರು ಕಾಲೆಳೆಯುತ್ತಾ ಇರುತ್ತಿದ್ದ ಸಿಎಂ ಸಿದ್ರಾಮಯ್ಯ ಹಾಗೂ ಸಂಸದ ಪ್ರತಾಪ್ ಸಿಂಹ ಇಂದು ದಸರಾ ಉದ್ಘಾಟನಾ ವೇದಿಕೆಯಲ್ಲಿ ಪರಸ್ಪರ ಮೆಚ್ಚುಗೆಯ ಮಾತುಗಳನ್ನಾಡಿದರು. ಸಿಎಂರನ್ನು ನಾನು ಸಾಕಷ್ಟು ಭಾರಿ ಟೀಕಿಸಿದ್ದೇನೆ. ಮುಖ್ಯಮಂತ್ರಿಗಳ ಮಾತು ಒರಟು, ಆದರೆ ಮೃದು ಹೃದಯಿಗಳು ಅಂತ ಪ್ರತಾಪ್ ಸಿಂಹ ಹೇಳಿದರೆ ನನ್ನನ್ನ ಪ್ರತಾಪ್ ಸಿಂಹ ಚೆನ್ನಾಗಿ ಅಬ್ಸರ್ವ್ ಮಾಡಿದ್ದಾರೆ ಅಂತ ವೇದಿಕೆ ಮೇಲೆ ಪ್ರತಾಪ್ ಸಿಂಹರನ್ನು ಸಿಎಂ ಶ್ಲಾಘಿಸಿದರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
