ಒಕ್ಕಲಿಗರಿಗೆ ಭಾವನಾತ್ಮಕ ಗಾಳ ಹಾಕಿದ ಸಿಎಂ

First Published 5, Mar 2018, 8:33 PM IST
CM Siddaramaih Emotional Appeal to Vakkaligas
Highlights

2006ರ ಉಪಚುನಾವಣೆಯಲ್ಲಿ ಒಕ್ಕಲಿಗರು 90%  ನನಗೆ ಓಟ್ ಹಾಕಿದ್ದರು, ಅತ್ತು ಕರೆದು ದೇವೇಗೌಡರು ಒಂದಷ್ಟು ಓಟು ಕಿತ್ತರು. ಇದು ಕೊನೆ ಚುನಾವಣೆ, ಮುಂದೆ ಸಕ್ರಿಯ ರಾಜಕೀಯದಲ್ಲಿ ಇರುತ್ತೇನೆ. ಮುಂದೆ ರಾಜಕೀಯವಾಗಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಉಳಿದ ಕೆಲಸ ಮಾಡ್ತೇನೆ, ಹಾಗಾಗಿ ಇದೊಂದು ಅವಕಾಶ ಮಾಡಿಕೊಡಿ ಎಂದು ಕ್ಷೇತ್ರದ ಜನರಿಗೆ ಮನವಿ ಮಾಡಿಕೊಂಡರು.

ಜಯಪುರ(ಮಾ.05): ಮುಂಬರುವ ಚುನಾವಣೆ ನನ್ನ ಜೀವನದ ಕೊನೆಯ ಚುನಾವಣೆ ಆಗಿದ್ದು, ನನಗೆ ಆಶೀರ್ವಾದ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಜಯಪುರದಲ್ಲಿ ಮಾತನಾಡಿದ ಅವರು, 2006 ಉಪ ಚುನಾವಣೆ ಬಹಳ ಕಷ್ಟದ ಚುನಾವಣೆಯಾಗಿತ್ತು. ಆವಾಗ್ಲೇ ನನಗೆ ಆಶಿರ್ವಾದ ಮಾಡಿದ್ದೀರ. ಇದು ನನ್ನ ಜೀವನದ ಕೊನೆಯ ಚುನಾವಣೆ ಆಗಿರುವುದರಿಂದ ನನಗೆ ಆಶೀರ್ವಾದ ಮಾಡಿ. ಗೆದ್ದ ಮೇಲೆ ನಾನೇ ಮತ್ತೆ ರಾಜ್ಯದಲ್ಲಿ ಸಿಎಂ ಆಗ್ತೇನೆ ಎಂದು ಸಿಎಂ ಹೇಳಿದ್ದಾರೆ.

loader