‘ರೀ ಮತ್ತೆ ನಾನೆ ಸಿಎಂ ಆಗುತ್ತೇನೆ. ಮತ್ತೆ ಚಾಮರಾಜನಗರಕ್ಕೆ ಹೋಗುತ್ತೇನೆ’ ಎನ್ನುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ ಅವಧಿಗೂ ತಾವೇ ಸಿಎಂ ಎಂಬುದನ್ನು ಪುನರುಚ್ಚರಿಸಿದರು.

ವಿಧಾನಸಭೆ: ‘ರೀ ಮತ್ತೆ ನಾನೆ ಸಿಎಂ ಆಗುತ್ತೇನೆ. ಮತ್ತೆ ಚಾಮರಾಜನಗರಕ್ಕೆ ಹೋಗುತ್ತೇನೆ’ ಎನ್ನುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ ಅವಧಿಗೂ ತಾವೇ ಸಿಎಂ ಎಂಬುದನ್ನು ಪುನರುಚ್ಚರಿಸಿದರು.

ಮೌಢ್ಯ ನಿಷೇಧ ಕಾಯ್ದೆ ಕುರಿತು ಬಿಜೆಪಿ ಸದಸ್ಯ ಸಿ.ಟಿ.ರವಿ ಮಾತನಾಡುವಾಗ ಕಾಯ್ದೆ ತರಲು ಹೊರಟಿರುವ ಸಿಎಂ, ಕಾಗೆ ಕುಳಿತ ಕಾರಣಕ್ಕೆ ಕಾರ್ ಬದಲಾವಣೆ ಮಾಡಿದರು ಎಂದು ರೇಗಿಸಿದರು. ಆಗ ಸಿದ್ದರಾಮಯ್ಯ, ರವೀ, ನಾನು ಕಾಗೆ ಕೂರುವ ಮುನ್ನವೇ ಹೊಸ ಕಾರು ತಗೊಂಡಿದ್ದೆ. ಈಗಲೂ ಬೇಕಿದ್ದರೆ ನನ್ನ ಕಾರ್ ಮೇಲೆ 20 ಕಾಗೆ ತಂದು ಬಿಡು ಎಂದರು.

ಆಗ ಜಗದೀಶ್ ಶೆಟ್ಟರ್, ನಾನು ಸಿಎಂ ಆದ ಬಳಿಕ ಮೂರು ಸಾರಿ ಚಾಮರಾಜನಗರಕ್ಕೆ ಹೋಗಿದ್ದೆ ಎಂದರು. ಆಗ ಸಿದ್ದರಾಮಯ್ಯ ಅವರು, ರೀ ನಾನು ಈಗಾಗಲೇ 10 ಸಲ ಹೋಗಿದ್ದೇನೆ ಎಂದರು.