ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ತಮಿಳು, ಬಂಗಾಳಿ ಭಾಷೆ ಕಲಿಯುತ್ತಿ ದ್ದಾರೆ ಎಂಬ ವರದಿಯ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಟ್ವೀಟರ್ ಮೂಲಕ, ಕನ್ನಡ ಕಲಿಯೋದಿಲ್ವಾ ಅಮಿತ್ ಶಾ ಅವರೇ ಎಂದು ಟಾಂಗ್ ನೀಡಿದ್ದಾರೆ.
ಬೆಂಗಳೂರು: ಕನ್ನಡ ಕಲಿಯೋದಿಲ್ವಾ ಅಮಿತ್ ಶಾ ಅವರೇ..? ಇದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಪ್ರಶ್ನೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ತಮಿಳು, ಬಂಗಾಳಿ ಭಾಷೆ ಕಲಿಯುತ್ತಿ ದ್ದಾರೆ ಎಂಬ ವರದಿಯ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಟ್ವೀಟರ್ ಮೂಲಕ, ಕನ್ನಡ ಕಲಿಯೋದಿಲ್ವಾ ಅಮಿತ್ ಶಾ ಅವರೇ ಎಂದು ಟಾಂಗ್ ನೀಡಿದ್ದಾರೆ.
ಸಿ.ಟಿ.ರವಿ ತಿರುಗೇಟು: ಸಿದ್ದರಾಮಯ್ಯ ಅವರ ಈ ಟಾಂಗ್‌ಗೆ ತಿರುಗೇಟು ನೀಡಿರುವ ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ಸಿ.ಟಿ. ರವಿ, ರಾಜ್ಯೋತ್ಸವ ದಿನದಂದು ಕನ್ನಡಿಗರಿಗೆ ಶುಭ ಕೋರದ ರಾಹುಲ್ ಗಾಂಧಿರನ್ನು ಪ್ರಶ್ನಿಸದ ಸಿದ್ದರಾಮಯ್ಯ ಅವರು ಅಮಿತ್ ಶಾ ಅವರಿಗೆ ಕನ್ನಡ ಕಲಿಯೋದಿಲ್ವಾ ಎಂದು ಪ್ರಶ್ನಿಸಿರುವುದು ಬೂಟಾಟಿಕೆ ಎಂದಿದ್ದಾರೆ.
