ವರುಣಾದಲ್ಲಿ ನನ್ನ ಮಗ ನಿಂತರೂ ಸಿಎಂ ಮಗ ಅಂತ ವೋಟು ಹಾಕಲ್ಲ; ವಿಜಯೇಂದ್ರಗೆ ಹಾಕ್ತಾರಾ? ಸಿಎಂ ಟಾಂಗ್

First Published 2, Apr 2018, 11:24 AM IST
CM Siddaramaiah Slams BSY And Vijayendra
Highlights

ವರುಣ ಕ್ಷೇತ್ರದಲ್ಲಿ ಬಿಎಸ್’ವೈ ಪುತ್ರ  ವಿಜಯೇಂದ್ರ ಸ್ಪರ್ಧೆ ವಿಚಾರವಾಗಿ  ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಮೈಸೂರು (ಏ. 02):  ವರುಣ ಕ್ಷೇತ್ರದಲ್ಲಿ ಬಿಎಸ್’ವೈ ಪುತ್ರ  ವಿಜಯೇಂದ್ರ ಸ್ಪರ್ಧೆ ವಿಚಾರವಾಗಿ  ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ವಿಜಯೇಂದ್ರ ಯಾಕೆ, ಅವರಪ್ಪ ಯಡಿಯೂರಪ್ಪ ಅವರೇ ಬಂದು ನಿಲ್ಲೋಕೆ ಹೇಳಿ.   ಯಡಿಯೂರಪ್ಪನಿಗೂ ವರುಣ ಕ್ಷೇತ್ರಕ್ಕೂ ಸಂಬಂಧವೇನು ? ಅವರು ಬಂದು ನಿಂತ ತಕ್ಷಣ ಜನ ಓ... ಅಂತ ಓಡಿ ಬರ್ತಾರಾ? ನನ್ನ ಮಗ ಚುನಾವಣೆಗೆ ನಿಂತರೂ ಸಿಎಂ ಮಗ ಅಂತ ವೋಟು ಹಾಕೋದಿಲ್ಲ.  ಸಿಎಂ ಆಗಿ ನಾನು ಏನು ಕೆಲಸ ಮಾಡಿದ್ದೀನಿ ಅನ್ನೋದರ ಮೇಲೆ ವೋಟು ಹಾಕ್ತಾರೆ.  ವರುಣ ಕ್ಷೇತ್ರದ ಜನರ ಕಷ್ಟಕ್ಕೆ ಸ್ಪಂದಿಸಿರೋದು ನಾನು. ಆ ಕ್ಷೇತ್ರದಲ್ಲಿ ಕೆಲಸ ಮಾಡಿರೋದು ನಾನು. ಯಾರೋ ಬಂದು ನಿಂತ ತಕ್ಷಣ ಅಲ್ಲಿನ ಜನ ಬದಲಾಗೋದಿಲ್ಲ. ಜನರಿಗೆ ಯಾರಿಗೆ ವೋಟು ಹಾಕಬೇಕು ಅಂತ ಗೊತ್ತಿದೆ ಎಂದು ಸಿಎಂ ಹೇಳಿದ್ದಾರೆ. 

ಮಾಜಿ ಮುಖ್ಯಮಂತ್ರಿಗಳ ಮಕ್ಕಳು ನಿಂತು ಗೆಲ್ಲೋದಾಗಿದ್ರೆ ಯಾರ್ಯಾರೊ ಎಲ್ಲೆಲ್ಲೊ ನಿಲ್ಲುತ್ತಿದ್ರು.  ವಿಜಯೇಂದ್ರ ಬಗ್ಗೆ ನನ್ನ ಬಳಿ ಪ್ರಶ್ನೆಯನ್ನೇ ಕೇಳಬೇಡಿ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 

loader