ಸಾಲ ಮನ್ನಾಗೆ ನನ್ನ ವಿರೋಧವಿಲ್ಲ. ಈ ವಿಚಾರ ವನ್ನು ನಾವು ಗಂಭೀರ ವಾಗಿ ಚಿಂತನೆ ನಡೆಸುತ್ತಿದ್ದೇವೆ. ಆದರೆ ರಾಜ್ಯದ ಎಲ್ಲ ರೈತರಿಗೂ ಇದರ ಪ್ರಯೋಜನ ಆಗ ಬೇಕು. ನಾವು ಸಾಲ ಮನ್ನಾ ಮಾಡಿದರೆ ಕೆಲವೇ ರೈತರಿಗೆ ಲಾಭವಾಗುತ್ತದೆ, ರೈತರ ನಡುವೆ ತಾರತಮ್ಯ ಆಗಬಾರದು ಎಂಬುದಷ್ಟೇ ನನ್ನ ಬಯಕೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು(ಜೂ.12): ಸಾಲ ಮನ್ನಾಗೆ ನನ್ನ ವಿರೋಧವಿಲ್ಲ. ಈ ವಿಚಾರ ವನ್ನು ನಾವು ಗಂಭೀರ ವಾಗಿ ಚಿಂತನೆ ನಡೆಸುತ್ತಿದ್ದೇವೆ. ಆದರೆ ರಾಜ್ಯದ ಎಲ್ಲ ರೈತರಿಗೂ ಇದರ ಪ್ರಯೋಜನ ಆಗ ಬೇಕು. ನಾವು ಸಾಲ ಮನ್ನಾ ಮಾಡಿದರೆ ಕೆಲವೇ ರೈತರಿಗೆ ಲಾಭವಾಗುತ್ತದೆ, ರೈತರ ನಡುವೆ ತಾರತಮ್ಯ ಆಗಬಾರದು ಎಂಬುದಷ್ಟೇ ನನ್ನ ಬಯಕೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಭಾನುವಾರ ನಗರದ ತೊರವಿ ಬಳಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಸಾಲಮನ್ನಾ ಮಾಡಿದರೆ ಬರೀ ಕೆಲವೇ ರೈತರಿಗೆ ಲಾಭವಾಗುತ್ತದೆ. ಹೀಗಾಗಿ ಕೇಂದ್ರ ಸರ್ಕಾರ ಸಾಲ ಮನ್ನಾ ಮಾಡಿದ ತಕ್ಷಣವೇ ನಾವು ಸಾಲಮನ್ನಾ ಮಾಡಿ ಘೋಷಣೆ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಪುನರುಚ್ಚರಿ ಸಿದರು. ಸಮಾರಂಭದಲ್ಲಿ ಸಿದ್ದರಾಮಯ್ಯಭಾಷಣ ಮಾಡುತ್ತಿದ್ದ ವೇಳೆ ಸಭಿಕರಲ್ಲಿ ಕೆಲವರು ಸಾಲಮನ್ನಾ ಮಾಡಿ ಘೋಷಣೆ ಮಾಡಬೇಕು ಎಂದು ಏರಿದ ಧ್ವನಿ ಯಲ್ಲಿ ಕೂಗಿದರು. ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ‘‘ಕುತ್ಕಳ್ರಪ್ಪ ಅದನ್ನು ಇಲ್ಲೇ ಕೇಳೋದಾ?'' ಎಂದು ಹೇಳಿದರು.
ಸಾಲಮನ್ನಾ ಮಾಡಲು ನಮ್ಮ ಸರ್ಕಾರ ಈಗಲೂ ಬದ್ಧವಿದೆ. ಸಾಲಮನ್ನಾಕ್ಕೆ ನನ್ನ ವಿರೋಧವಿಲ್ಲ. ಸಾಲಮನ್ನಾ ವಿಷಯದಲ್ಲಿ ರೈತರ ನಡುವೆ ತಾರತಮ್ಯವಾಗಬಾರದು ಎಂಬುದು ನನ್ನ ಬಯಕೆ. ನಾವು ದೆಹಲಿಗೆ ನಿಯೋಗ ಹೋಗಿ ಪ್ರಧಾನಿ ಮೋದಿ ಅವರಿಗೆ ಸಾಲಮನ್ನಾ ಮಾಡುವಂತೆ ಕೋರಿದ್ದೇವೆ. ಆದರೆ ಕೇಂದ್ರ ಸರ್ಕಾರ ಈ ಬಗ್ಗೆ ಮೌನ ವಹಿಸಿದೆ ಎಂದರು.
