ಮಾಜಿ ಸಚಿವ ಮೇಟಿ ಪ್ರಕರಣದಲ್ಲಿ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಪ್ರಕರಣದಲ್ಲಿ ಈಗಾಗಲೇ ಮೇಟಿಗೆ ಕ್ಲೀನ್  ಚೀಟ್ ಸಿಕ್ಕಾಗಿದೆ. ಈಗ ಮತ್ತೆ ಮಹಿಳೆ ಆರೋಪ ಮಾಡುತ್ತಿರುವುದನ್ನು ಗಮನಿಸಿದರೆ ಕಾಣದ ಕೈಗಳು ಕೆಲಸ ಮಾಡುತ್ತಿವೆ‌‌‌ ಎಂದು ಅನಿಸುತ್ತಿದೆ ಎಂದರು.

ವಿಜಯಪುರ: ಮಾಜಿ ಸಚಿವ ಮೇಟಿ ಪ್ರಕರಣದಲ್ಲಿ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಪ್ರಕರಣದಲ್ಲಿ ಈಗಾಗಲೇ ಮೇಟಿಗೆ ಕ್ಲೀನ್ ಚೀಟ್ ಸಿಕ್ಕಾಗಿದೆ. ಈಗ ಮತ್ತೆ ಮಹಿಳೆ ಆರೋಪ ಮಾಡುತ್ತಿರುವುದನ್ನು ಗಮನಿಸಿದರೆ ಕಾಣದ ಕೈಗಳು ಕೆಲಸ ಮಾಡುತ್ತಿವೆ‌‌‌ ಎಂದು ಅನಿಸುತ್ತಿದೆ ಎಂದರು.

ಮೇಟಿ ರಾಸಲೀಲೆ ಪ್ರಕರಣ ಸಂಬಂಧಿಸಿದಂತೆ ಸಿಡಿಯಲ್ಲಿದ್ದ ವೀಡಿಯೋದಲ್ಲಿರುವುದು ನಾನೇ ಎಂದು ನಿನ್ನೆ ಸಂತ್ರಸ್ತೆ ಹೇಳಿದ್ದರು.

ತನಗೆ ಹಾಗೂ ತನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದ್ದುದರಿಂದ ಅನ್ಯಾಯದ ಬಗ್ಗೆ ಹೇಳಿಕೊಳ್ಳಲು ಸಾಧ್ಯವಾಗಲಿಲ್ಲ. ಜೀವ ಬೆದರಿಕೆ ಹಾಕಿ ಹಲವು ಬಾರಿ ನನ್ನ ಮೇಲೆ ಮೇಟಿ ಅತ್ಯಾಚಾರ ಮಾಡಿದ್ದಾರೆ. ಅವರಿಗೆ ಕಠಿಣ ಶಿಕ್ಷೆಯಾಗಿ ನನಗೆ ನ್ಯಾಯ ಸಿಗಬೇಕೆಂದು ಹೇಳಿದ್ದ ಸಂತ್ರಸ್ತೆ ದೂರು ದಾಖಲಿಸಿರುವುದಾಗಿ ತಿಳಿಸಿದ್ದರು.