ಟ್ವಿಟರ್ ಬಳಕೆದಾರರು ಸಿದ್ದರಾಮಯ್ಯನವರನ್ನು ಈ @siddaramaiah ಖಾತೆಯಲ್ಲಿ ಫಾಲೋ ಮಾಡಬಹುದಾಗಿದೆ.
ಬೆಂಗಳೂರು: ಈವರೆಗೆ ಮುಖ್ಯಮಂತ್ರಿ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಜನರೊಂದಿಗೆ ಸಂಪರ್ಕದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ವೈಯುಕ್ತಿಕ ಖಾತೆಯ ಮೂಲಕ ಟ್ವಿಟರ್ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ನಾಡಿನ ಜನರೊಂ ನನ್ನ ಒಡನಾಟವನ್ನು ಮತ್ತಷ್ಟು ಹೆಚ್ಚಿಸುವ ಹಾಗೂ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಉದ್ದೇಶದಿಂದ ಟ್ವಿಟರ್’ನಲ್ಲಿ ವೈಯುಕ್ತಿಕ ಖಾತೆಯನ್ನು ತೆರೆದಿದ್ದೇನೆ ಎಂದಿರುವ ಸಿದ್ದರಾಮಯ್ಯ, ಸಾಮಾಜಿಕ ಪರಿವರ್ತನೆಯ ಹಾದಿಯಲ್ಲಿ ಜತೆಯಾಗಿ ಸಾಗೋಣ ಎಂದು ನೆಟಿಝನ್’ಗಳಿಗೆ ಕರೆ ನೀಡಿದ್ದಾರೆ
ಟ್ವಿಟರ್ ಬಳಕೆದಾರರು ಸಿದ್ದರಾಮಯ್ಯನವರನ್ನು ಈ @siddaramaiah ಖಾತೆಯಲ್ಲಿ ಫಾಲೋ ಮಾಡಬಹುದಾಗಿದೆ.
