Asianet Suvarna News Asianet Suvarna News

ಅದೇನು ಮರ ಕಡಿಯುವ ಕಾರ್ಯಕ್ರಮನಾ? ಸಿಎಂ ಪ್ರಶ್ನೆ

ಬೆಂಗಳೂರು ಇಡೀ ಏಷ್ಯಾದಲ್ಲೆ ವೇಗವಾಗಿ ಬೆಳೆಯುತ್ತಿರುವ ನಗರ, ಇಲ್ಲಿ ವಾಹನಗಳ ಸಂಖ್ಯೆಯು ಹೆಚ್ಚಾಗ್ತಿದೆ, ಇಲ್ಲಿನ ನಾಗರಿಕರಿಗೆ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರ ಹಾಗೂ ಪಾಲಿಕೆ ಕರ್ತವ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.        

CM Siddaramaiah Justifies Steel Bridge Project

ಬೆಂಗಳೂರು: ಶಿವಾನಂದ ಸರ್ಕಲ್'ನಲ್ಲಿ ತಲೆ ಎತ್ತಲಿರುವ ಸ್ಟೀಲ್ ಸೇತುವೆ ಯೋಜನೆಯನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ,  ಬೆಂಗಳೂರು ಇಡೀ ಏಷ್ಯಾದಲ್ಲೆ ವೇಗವಾಗಿ ಬೆಳೆಯುತ್ತಿರುವ ನಗರ, ಇಲ್ಲಿ ವಾಹನಗಳ ಸಂಖ್ಯೆಯು ಹೆಚ್ಚಾಗ್ತಿದೆ, ಇಲ್ಲಿನ ನಾಗರಿಕರಿಗೆ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರ ಹಾಗೂ ಪಾಲಿಕೆ ಕರ್ತವ್ಯ ಎಂದು ಹೇಳಿದ್ದಾರೆ.                     

ಜಂಕ್ಷನ್’ಗಳಲ್ಲಿ ಅಡೆತಡೆ ಇಲ್ಲದೆ ಜನ ಓಡಾಡಲು 204 ಕೋಟಿ ವೆಚ್ಚದಲ್ಲಿ ಮೇಲು ಸೇತುವೆ ಮಾಡಲಾಗ್ತಿದೆ, ಸ್ಟೀಲ್ ಬ್ರಿಡ್ಜ್ ಮಾಡಲು ಮರ ಕಡಿಲೇಬೇಕಾದ ಪ್ರಮೇಯವಿಲ್ಲ, ಅದೇನು ಮರ ಕಡಿಯುವ ಕಾರ್ಯಕ್ರಮನಾ? ಎಂದು ಸಿಎಂ ಹೇಳಿದ್ದಾರೆ.

ಮರಗಳನ್ನು ನಾಶಪಡಿಸಲು ಮುಂದಾಗ್ತಿಲ್ಲ, ಗಿಡಗಳನ್ನು ನೆಡಲು ಪಾಲಿಕೆಯು ಬದ್ಧವಾಗಿದೆ. ಶಿವಾನಂದ ಸರ್ಕಲಲ್ಲಿ ಫ್ಲೈಓವರ್ ಬೇಕೇ ಬೇಕು. ಆದರೆ ಪರಿಸರವಾದಿಗಳು, ವಿರೋಧ ಪಕ್ಷದವರು ಭ್ರಷ್ಟಾಚಾರ ಮಾಡಿದ್ದೀವಿ ಎಂಬ ಹಾಗೆ ಆರೋಪ ಮಾಡ್ತಿದ್ದಾರೆ, ಎಂದು ಸಿಎಂ ಅಸಮಾದಾನ ವ್ಯಕ್ತಪಡಿಸಿದ್ದಾರೆ.                       

ಇಂದಿರಾ ಕ್ಯಾಂಟಿನ್ ಮಾಡಲು ಮುಂದಾಗುವಾಗ್ಲೆ ವಿರೋಧ ಪಕ್ಷದವ್ರು ಆರೋಪ ಮಾಡ್ತಿದ್ದಾರೆ, ದುಡ್ಡು ಹೊಡ್ದು ಬಿಟ್ಟಿದ್ದಾರೆ ಅಂತಾರೆ, ನಮ್ಮ ಸರ್ಕಾರ ಉತ್ತಮ ಕೆಲಸ ಮಾಡಿದನ್ನು ನೋಡಲು ಆಗದೆ ಇರೋರು ಈ ರೀತಿ ಆರೋಪ ಮಾಡ್ತಿದ್ದಾರೆ, ಎಂದು ವಿಪಕ್ಷಗಳ ವಿರುದ್ಧ ಸಿಎಂ ಹರಿಹಾಯ್ದಿದ್ದಾರೆ.            

ಆಗಸ್ಟ್ 15 ಕ್ಕೆ ಇಂದಿರಾ ಕ್ಯಾಂಟಿನ್ ಉದ್ಘಾಟನೆ ಆಗಲಿದೆ. ಇನ್ನುಳಿದ ಕ್ಯಾಂಟಿನ್ ಅಕ್ಟೋಬರ್‌ 4 ಕ್ಕೆ ಚಾಲನೆ ಸಿಗಲಿದೆ, ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಚುನಾವಣೆ ಹತ್ತಿರವಾಗ್ತಿದ್ದಂತೆ ರಾಜಕೀಯ ಕನ್ನಡ ಹಾಕೊಂಡು ನೋಡಕ್ಕಾಗುತ್ತಾ? ಕಾಮಾಲೆ ಕಣ್ಣಿಗೆ ಎಲ್ಲವೂ ಕಾಣೋದೆಲ್ಲ ಹೀಗೆ ಎಂದು ಸಿಎಂ ಪ್ರತಿಪಕ್ಷಗಳ ವಿರುದ್ಧ ವ್ಯಂಗ್ಯವಾಡಿದರು.

Follow Us:
Download App:
  • android
  • ios