ಕಾಂಗ್ರೆಸ್ ಹೈಕಮಾಂಡ್ಗೆ ಕಪ್ಪ ಸಲ್ಲಿಸಿದ ವಿವರಗಳುಳ್ಳ ಡೈರಿ ಬಹಿರಂಗಗೊಂಡ ಪ್ರಕರಣ ಸಿಎಂ ಬುಡಕ್ಕೇ ಬಂದಿದೆ. ಅಷ್ಟೇ ಅಲ್ಲ, ಡೈರಿ ಬಹಿರಂಗಗೊಂಡದ್ದು ಪ್ರತಿಪಕ್ಷಗಳವರಿಗೆ ಮಾತ್ರವೇ ಅಲ್ಲದೇ, ಕಾಂಗ್ರೆಸ್'ನ ಕೆಲವರಿಗೂ ಭಾರೀ ಖುಷಿ ತಂದಿದೆ. ಏಕೆ ಅಂತೀರಾ ಇಲ್ಲಿದೆ ವಿವರ
ಬೆಂಗಳೂರು(ಫೆ.25): ಕಾಂಗ್ರೆಸ್ ಹೈಕಮಾಂಡ್ಗೆ ಕಪ್ಪ ಸಲ್ಲಿಸಿದ ವಿವರಗಳುಳ್ಳ ಡೈರಿ ಬಹಿರಂಗಗೊಂಡ ಪ್ರಕರಣ ಸಿಎಂ ಬುಡಕ್ಕೇ ಬಂದಿದೆ. ಅಷ್ಟೇ ಅಲ್ಲ, ಡೈರಿ ಬಹಿರಂಗಗೊಂಡದ್ದು ಪ್ರತಿಪಕ್ಷಗಳವರಿಗೆ ಮಾತ್ರವೇ ಅಲ್ಲದೇ, ಕಾಂಗ್ರೆಸ್'ನ ಕೆಲವರಿಗೂ ಭಾರೀ ಖುಷಿ ತಂದಿದೆ. ಏಕೆ ಅಂತೀರಾ ಇಲ್ಲಿದೆ ವಿವರ
ಸಿಎಂಗೆ ಡೈರಿ ಸಂಕಟ
ಖುಷಿ ಪಡುತ್ತಿರುವವರಲ್ಲಿ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ತುಮಕೂರು ಹಾಗೂ ಉತ್ತರ ಕರ್ನಾಟಕದ ಭಾಗದಿಂದ ಸಚಿವರು ಹಾಗೂ ಸಿಎಂ ವಿರುದ್ಧ ಮೃದುವಾಗಿಯೇ ಮಸಲತ್ತು ಮಾಡುತ್ತಿದ್ದ ಮೂಲ ಕಾಂಗ್ರೆಸ್ಸಿಗರೂ ಇದ್ದಾರೆ.
ಬಹಿರಂಗಗೊಂಡಿರುವ ಡೈರಿಯಲ್ಲಿ ಹೆಚ್.ಸಿ.ಎಂ. ಕೆ.ಜೆ.ಜಿ, ಎಂ.ಬಿ.ಪಿ, ಆರ್.ವಿ.ಡಿ, ಕೆ.ಇ.ಎಂ.ಪಿ. ಅಂತಾ ಪ್ರಮುಖ ಹೆಸರನ್ನು ಉಲ್ಲೇಖಿಸಲಾಗಿದೆ. ಇವರೆಲ್ಲಾ ಸಿಎಂ ಬೆಂಬಲಿಗರೇ, ಜೊತೆಗೆ ಸ್ವತಃ ಗೋವಿಂದರಾಜು ಸಿಎಂ ಆಪ್ತರು. ಹೀಗಾಗಿ ಸಿಎಂ, ಡೈರಿ ಬಹಿರಂಗ ವಿಚಾರದ ಬಗ್ಗೆ ಹೈಕಮಾಂಡ್ ಜತೆ ಮಾತ್ರ ಚರ್ಚಿಸಿ ಮೌನವಹಿಸಿದ್ದಾರೆ.
ಕಪ್ಪ ಪಡೆದಿರುವವರ ಪಟ್ಟಿಯಲ್ಲಿ ಸೋನಿಯಾ, ರಾಹುಲ್ ಗಾಂಧಿ ಹಾಗೂ ಪ್ರಮುಖ ಹೈಕಮಾಂಡ್ ನಾಯಕರ ಹೆಸರೇ ಇರುವುದರಿಂದ ಹೈಕಮಾಂಡ್ ಸೂಚನೆಯಂತೆ ಮುಂದಿನ ನಡೆ ಇಡುವ ತೀರ್ಮಾನ ಮಾಡಿದ್ದಾರೆ. ಏನೇ ಆಗಲಿ, ಡೈರಿ ಬಹಿರಂಗಗೊಂಡಿರುವ ಪ್ರಕರಣ ನೇರ ದುಷ್ಪರಿಣಾಮ ಏನೇ ಇದ್ದರೂ ಅದು ಸಿಎಂ ಸಿದ್ದರಾಮಯ್ಯ ಬಣಕ್ಕೇ ಎನ್ನುವುದರಲ್ಲಿ ಎರಡು ಮಾತಿಲ್ಲ.
ವರದಿ: ವಿರೇಂದ್ರ ಉಪ್ಪುಂದ, ಸುವರ್ಣ ನ್ಯೂಸ್
