ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾತಾಡಿದ ಸಿಎಂ, ಕಾಂಗ್ರೆಸ್​​ ಶಾಸಕರು ಬಿಜೆಪಿಗೆ ಸೇರಲ್ಲ. ಈ ವಿಚಾರದಲ್ಲಿ ಯಡಿಯೂರಪ್ಪ  ಬರೀ ಸುಳ್ಳು ಹೇಳುತ್ತಿದ್ದಾರೆ ಅಂತ ಟೀಕಿಸಿದರು. ಒಂದು ಸುಳ್ಳನ್ನ 100 ಬಾರಿ ಹೇಳಿ ನಿಜ ಮಾಡುವ ಪ್ರಯತ್ನ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ಧಾರೆ.

ಮೈಸೂರು(ಅ.23): ಚುನಾವಣೆಗೆ 6 ತಿಂಗಳು ಮುನ್ನ ಕಾಂಗ್ರೆಸ್`ನ ಹಲವು ಶಾಸಕರು ಬಿಜೆಪಿ ಸೇರುತ್ತಾರೆ ಎಂಬ ಯಡಿಯೂರಪ್ಪ ಹೇಳಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಖಾರವಾಗಿ ಪ್ರತಿಕ್ರಿಯಿಸಿದ್ಧಾರೆ. ಕಾಂಗ್ರೆಸ್​​​ನ ಯಾವ ಶಾಸಕರು ಬಿಜೆಪಿಯತ್ತ ತಲೆ ಹಾಕಿಯೂ ಮಲಗುವುದಿಲ್ಲ, ಅದೊಂದು ಭ್ರಮೆ, ಸುಳ್ಳು ಹೇಳುವುದರಲ್ಲಿ ಬಿಜಿಪಿಯವರು ನಿಸ್ಸೀಮರು ಅಂತ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಗುಡುಗಿದ್ದಾರೆ.