ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅಧಿಕಾರಾವಧಿ ಮುಗಿಯಲು ಇನ್ನು ಕೆಲ ತಿಂಗಳು ಮಾತ್ರ ಬಾಕಿ ಇದೆ. ಈಗಾಗಲೇ ಮುಂದಿನ ಚುನಾವಣಗೆ ತಯಾರಿ ಕೂಡ ಭರದಿಂದ ಸಾಗಿದೆ. ಆದರೆ, ಸಿಎಂ ಅವರಿಗೆ ಮೊದಲಿದ್ದ ಆರಂಭಶೂರತ್ವ ಇದೀಗ ಕಿಂಚಿತ್ತೂ ಇಲ್ಲದಂತಾಗಿದೆ. ಇದಕ್ಕೆ ಸಾಕ್ಷಿ ಜನತಾ ದರ್ಶನ.

ಬೆಂಗಳೂರು(ಜೂ.02): ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅಧಿಕಾರಾವಧಿ ಮುಗಿಯಲು ಇನ್ನು ಕೆಲ ತಿಂಗಳು ಮಾತ್ರ ಬಾಕಿ ಇದೆ. ಈಗಾಗಲೇ ಮುಂದಿನ ಚುನಾವಣಗೆ ತಯಾರಿ ಕೂಡ ಭರದಿಂದ ಸಾಗಿದೆ. ಆದರೆ, ಸಿಎಂ ಅವರಿಗೆ ಮೊದಲಿದ್ದ ಆರಂಭಶೂರತ್ವ ಇದೀಗ ಕಿಂಚಿತ್ತೂ ಇಲ್ಲದಂತಾಗಿದೆ. ಇದಕ್ಕೆ ಸಾಕ್ಷಿ ಜನತಾ ದರ್ಶನ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ದಿನದಿಂದಲೂ ನಾನು ಜನರ ನಡುವಲ್ಲೇ ಇರುತ್ತೇನೆ. ಅವರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸ್ತೀನಿ ಅಂತ ಹೇಳುತ್ತಲೇ ಬಂದಿದ್ದಾರೆ. ಅದರಂತೆ ಮೊದಲು ಕೆಲ ತಿಂಗಳುಗಳ ಕಾಲ ಅದನ್ನ ಪಾಲಿಸಿಕೊಂಡು ಬಂದರೂ ಕೂಡ. ಆದರೆ ಇದೀಗ, ಸಿಎಂ ಜನರನ್ನೇ ಮರೆತಂತಿದೆ.

ಜನರ ನಡುವಲ್ಲೇ ಇರುತ್ತೇನೆ ಎಂದಿದ್ದ ಸಿಎಂ ಸಿದ್ದರಾಮಯ್ಯ ನಿಜಕ್ಕೂ ಜನರನ್ನು ಮರೆತರಾ ಎಂಬ ಪ್ರಶ್ನೆ ಮೂಡುವುದು ಸುಳ್ಳಲ್ಲ. ಯಾಕಂದ್ರೆ ಜನರ ಅಹವಾಲುಗಳನ್ನ ಸ್ವೀಕರಿಸಿ, ಅವರಿಗೆ ಸ್ಪಂದಿಸುವ ಕಾರ್ಯಕ್ರಮವೇ ಸಿಎಂ ಜನತಾ ದರ್ಶನ. ಆದರೆ, ಕಳೆದ 18 ತಿಂಗಳುಗಳಿಂದ ಜನರಿಗೆ ಸಿಎಂ ಅವರ ದರ್ಶನ ಭಾಗ್ಯವೇ ಇಲ್ಲದಂತಾಗಿದೆ.

ಜನರನ್ನೇ ಮರೆತರಾ ಸಿಎಂ ಎಂಬ ಅನುಮಾನ ಕಾಡದೇ ಇರಲ್ಲ. ಯಾಕೆಂದರೆ ಕಳೆದ 18 ತಿಂಗಳಿನಿಂದ ಮುಖ್ಯಮಂತ್ರಿ ಜನತಾ ದರ್ಶನವನ್ನೇ ಮಾಡಿಲ್ಲ. ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಆರಂಭಶೂರತ್ವ ತೋರಿದ್ದ ಸಿಎಂ, 2013ರಲ್ಲಿ 9 ಬಾರಿ ಜನತಾ ದರ್ಶನ ನಡೆಸಿದ್ದರು. ಬಳಿಕ 2016ರಿಂದ ಇಲ್ಲಿಯವರೆಗೂ ಒಂದೂ ಜನತಾ ದರ್ಶನ ಮಾಡಲೇ ಇಲ್ಲ. 2015ರ ನವೆಂಬರ್ ತಿಂಗಳಲ್ಲಿ ಸಿಎಂ ಕಡೆಯ ಜನತಾ ದರ್ಶನ ಮಾಡಿದ್ದರು. ಇನ್ನು, ಚುನಾವಣಾ ಪ್ರಚಾರಕ್ಕೆ ಹೋಗಲು ಸಿಎಂ ಸಾಹೇಬರಿಗೆ ಸಮಯವಿದೆ ಅಲ್ಲದೇ, ದಿನಕ್ಕೆ ಎರಡು ಬಾರಿ ಸಿನಿಮಾ ನೋಡಲು ಸಮಯವಿರುತ್ತೆ. ಆದರೆ, ಜನತಾ ದರ್ಶನ ಮಾಡಲು ಮಾತ್ರ ಮುಖ್ಯಮಂತ್ರಿಗಳಿಗೆ ಸಮಯವಿಲ್ಲ.

ಒಟ್ಟಿನಲ್ಲಿ, ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಆರಂಭದಲ್ಲಿ ಇದ್ದ ಕಾಳಜಿ, ಕಳೆದ ಒಂದೂವರೆ ವರ್ಷದಿಂದ ಕಾಣದಾಗಿದೆ. ಇದಕ್ಕೆ ಮುಖ್ಯಮಂತ್ರಿಗಳೇ ಉತ್ತರ ನೀಡಬೇಕಿದೆ.