ವೀರಶೈವ ಮತ್ತು ಲಿಂಗಾಯತ ಸಮಾಜಗಳೆರಡೂ ಹಿಂದೂ ಧರ್ಮದ ಬಲಿಷ್ಠ ಭಾಗಗಳಾಗಿದ್ದು, ಈಗ ಅವೆರಡು ಪ್ರತ್ಯೇಕ ಧರ್ಮ ಮಾಡುವ ಪ್ರಸ್ತಾಪ ಕೈಬಿಡಬೇಕು ಎಂದು ಉಡುಪಿಯ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಆಗ್ರಹಿಸಿದ್ದಾರೆ.
ನಮ್ಮ ಸಮುದಾಯದ ಸ್ವಾಮಿಗಳಿದ್ದಾರೆ. ಹಾಗಾಗಿ ಪೇಜಾವರ ಶ್ರೀಗಳ ಮಧ್ಯಪ್ರವೇಶ ಸಾಧುವಲ್ಲ ಎಂದು ಎಂ ಬಿ ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಲಿಂಗಾಯಿತ ಧರ್ಮ ಜಾಗತಿಕ ಧರ್ಮ ಆಗಬೇಕು. ಇದರಲ್ಲಿ ಸಿದ್ದರಾಮಯ್ಯನವರನ್ನು ಎಳೆದು ತರಬಾರದು. ಲಿಂಗಾಯಿತ ಪ್ರತ್ಯೇಕ ಧರ್ಮಕ್ಕೆ ನಮ್ಮ ಬೆಂಬಲವಿದೆ ಎಂದಿದ್ದಾರೆ.
ಪೇಜಾವರ ಶ್ರೀಗಳು ಒಂದು ಸಿದ್ದಾಂತದ ಕಪಿಮುಷ್ಟಿಯಲ್ಲಿದ್ದವರು. ಆರ್’ಎಸ್ಎಸ್'ನಲ್ಲಿ ಇದ್ದವರು. ಸ್ವಾಭಾವಿಕವಾಗಿ ಹಿಂದೂ ಧರ್ಮದಲ್ಲೇ ಮುಂದುವರೆಯಬೇಕು ಎಂದು ಅವರು ಬಯಸುತ್ತಾರೆ. ಆದರೆ ಈ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದು ತರವಲ್ಲ ಎಂದು ಪಾಟೀಲ್ ಹೇಳಿದ್ದಾರೆ.
