ಕನ್ನಡ ಭಾಷಿಗರನ್ನೇ ಕರ್ನಾಟಕದ ಬ್ಯಾಂಕ್​​ಗಳಿಗೆ ನೇಮಿಸಿ. ಎಸ್'ಎಸ್'ಎಲ್ಸಿವರೆಗೆ ಕನ್ನಡ ಓದದವರನ್ನು ಅನರ್ಹಗೊಳಿಸಿ.

ಬೆಂಗಳೂರು(ಸೆ.11): ಬ್ಯಾಂಕಿಂಗ್​ ಪರೀಕ್ಷೆಯಲ್ಲಿ ಕನ್ನಡಿಗರಿಗೆ ಅನ್ಯಾಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

ಕನ್ನಡ ಭಾಷಿಗರನ್ನೇ ಕರ್ನಾಟಕದ ಬ್ಯಾಂಕ್​​ಗಳಿಗೆ ನೇಮಿಸಿ. ಎಸ್'ಎಸ್'ಎಲ್ಸಿವರೆಗೆ ಕನ್ನಡ ಓದದವರನ್ನು ಅನರ್ಹಗೊಳಿಸಿ. ರಾಜ್ಯದ ಬ್ಯಾಂಕಿಂಗ್​​ ಹುದ್ದೆಗೆ ಪರೀಕ್ಷೆ ಬರೆಯಲು ಕನ್ನಡಿಗರಿಗೆ ಪ್ರಾಮುಖ್ಯತೆ ನೀಡಿ. ಅಬಕಾರಿ, ರೈಲ್ವೆ ಇಲಾಖೆಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿ ಎಂದು ಆಗ್ರಹಿಸಿದ ಅವರು ಪ್ರಾದೇಶಿಕ ಭಾಷಿಕರಿಗೆ ಆದ್ಯತೆ ನೀಡುವ ಕಾನೂನು ರಚಿಸುವಂತೆ ಮನವಿ ಮಾಡಿದ್ದಾರೆ. ಸೆಪ್ಟೆಂಬರ್​ 9ರಂದು ಬ್ಯಾಂಕಿಂಗ್​​ ಪರೀಕ್ಷೆ ನಿಯಮ ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆದಿತ್ತು.