ನವದೆಹಲಿ(ಜೂ.15): ರಾಜ್ಯದಲ್ಲಿ ಬರ ಪರಿಸ್ಥಿತಿ ಮುಂದುವರೆದಿದ್ದು, ನೆರವಿಗೆ ಧಾವಿಸುವಂತೆ ಸಿಎಂ ಕುಮಾರಸ್ವಾಮಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದ್ದಾರೆ.

"

ನವದೆಹಲಿಯಲ್ಲಿ ಇಂದು ನಡೆಯಲಿರುವ ನೀತಿ ಆಯೋಗದ ಸಭೆಗೂ ಮುನ್ನ ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಕುಮಾರಸ್ವಾಮಿ, ರಾಜ್ಯ ಶೇ.45ರಷ್ಟು ಮಳೆಯ ಕೊರತೆ ಎದುರಿಸುತ್ತಿದ್ದು ಬರ ಪರಿಹಾರ ಘೋಷಣೆಗೆ ಮನವಿ ಮಾಡಿದರು.

ಇದೇ ವೇಳೆ ನರೇಗಾ ಯೋಜನೆಯ 1,500 ಕೋಟಿ ಬಾಕಿ ಹಣ ಬಿಡುಗಡೆಗೂ ಆಗ್ರಹಿಸಿದ ಸಿಎಂ, ಸಾಲಮನ್ನಾ ಯಶಸ್ವಿ ಅನುಷ್ಠಾನದ ಕುರಿತು ಪ್ರಧಾನಿ ಅವರೊಂದಿಗೆ ಚರ್ಚೆ ನಡೆಸಿದರು.

ನರೇಂದ್ರ ಮೋದಿ ಅವರನ್ನು ಅವರು ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ಭೇಟಿ ಮಾಡಿದ ಕುಮಾರಸ್ವಾಮಿ, ಪ್ರಧಾನಿಯವರಿಗೆ ಶಾಲು ಹೊದಿಸಿ ಅಭಿನಂದಿಸಿದರು.