ಅಯ್ಯೋ ಬಿಜೆಪಿ ಶಾಸಕರನ್ನು ಸೆಳೆದರಾಯ್ತು ಬಿಡಿ: ಸಿಎಂ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 11, Sep 2018, 5:21 PM IST
CM Kumarswamy hint to woo BJP law makers to secure government
Highlights

ಸರ್ಕಾರ ಪತನ ಕೇವಲ ಮಾಧ್ಯಮಗಳ ಸೃಷ್ಟಿ! ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸ್ಪಷ್ಟನೆ! ಜಾರಕಿಹೊಳಿ ಸಹೋದರರ ಸಮಸ್ಯೆ ನನಗೆ ಗೊತ್ತಿಲ್ಲ! ಬಿಜೆಪಿಯಿಂದ ಐದಾರು ಶಾಸಕರನ್ನು ಸೆಳೆದರಾಯ್ತು! ಹೇಳಿಕೆ ನೀಡುವ ಭರದಲ್ಲಿ ಗುಟ್ಟು ಬಿಚ್ಚಿಟ್ಟ ಸಿಎಂ

ಬೆಂಗಳೂರು(ಸೆ.11): ಜಾರಕಿಹೊಳಿ ಸಹೋದರರಿಂದ ಸರ್ಕಾರಕ್ಕೆ ಎಫೆಕ್ಟ್ ಇದೆಯಾ ಎಂಬ ಪತ್ರಕರ್ತರ ಪ್ರಶ್ನೆಗೆ ವ್ಯಂಗ್ಯವಾಗಿ ಉತ್ತರಿಸಿರುವ ಸಿಎಂ ಕುಮಾರಸ್ವಾಮಿ, ಹಾಗೆನಾದರೂ ಆದರೆ ಬಿಜೆಪಿಯಿಂದ ಐದಾರು ಶಾಸಕರನ್ನು ಸೆಳೆದರಾಯಿತು ಬಿಡಿ ಎಂದು ಹೇಳಿದ್ದಾರೆ.

ಮಾಧ್ಯಮದವರ ಪ್ರಶ್ನೆಗೆ ವ್ಯಂಗ್ಯವಾಗಿ ಉತ್ತರಿಸುವ ಮೂಲಕ ಸಿಎಂ ಹೊಸ ಬಾಂಬ್ ಸಿಡಿಸಿದ್ದಾರೆ.  ಈ ಮೂಲಕ ಸರ್ಕಾರಕ್ಕೆ ಕಂಟಕ ಎದುರಾದರೆ ಬಿಜೆಪಿ ಶಾಸಕರನ್ನು ಸೆಳೆಯುವ ಗುಟ್ಟನ್ನು ತಾವಾಗಿಯೇ ಸಿಎಂ ಬಿಟ್ಟುಕೊಟ್ಟಿದ್ದಾರೆ. 

ಜಾರಹೋಳಿ ಸಹೋದರರ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ತುಸು ಅಸಮಾಧಾನದಿಂದಲೇ ಉತ್ತರಿಸಿದ ಸಿಎಂ, ಸರ್ಕಾರಕ್ಕೆ ಜಾರಕಿಹೋಳಿ ಸಹೋದರರಿಂದ ಯಾವ ರೀತಿ ಎಫೆಕ್ಟ್ ಇದೆ?. ಅವರೇನು ಹೇಳಿಕೆ ನೀಡಿದ್ದಾರೆ?. ಅವರಿಗೆ ಅಸಮಾಧಾನ ಇರುವ ಬಗ್ಗೆ ನನಗೆ ಗೊತ್ತಿಲ್ಲ ಎಂದು ಅವರು ಪ್ರತಿಕ್ರಯೆ ನೀಡಿದ್ದಾರೆ.

"

ಮಾಧ್ಯಮಗಳು ಸರ್ಕಾರ ಬಿದ್ದೇ ಹೋಯ್ತು ಅನ್ನೋ ರೀತಿ ವರದಿ ಪ್ರಸಾರ ಮಾಡುತ್ತಿದ್ದು, ಇದೊಂತರಾ ತೋಳ ಬಂತು ತೋಳದ ಕತೆ ಇದ್ದ ಹಾಗಿದೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಹೈದರಾಬಾದ್‌ಗೆ 10 ಜನರ ಟೀಮ್, ಇಲ್ಲೆಲ್ಲೋ 10 ಜನರ ಟೀಮ್ ಅಂತಾ ವರದಿ ಬರುತ್ತವೆ. ಮಾಧ್ಯಮಗಳು ಯಾವ ಉದ್ದೇಶ ಹೊಂದಿವೆ ಎಂಬುದು ತಮಗೆ ಅರ್ಥವಾಗುತ್ತಿಲ್ಲ ಎಂದು ಸಿಎಂ ಹರಿಹಾಯ್ದರು. 

ಬೇಕು ಅಂದ್ರೆ ಸ್ವಲ್ಪ ದಿನ ಕಾದು ನೋಡೋಣ. ಬೇರೆ ರೀತಿ ಯೂಟರ್ನ್ ತಗೋಬೇಕು ಅಂದ್ರೆ ಐದು ಜನ ಬಿಜೆಪಿ ಶಾಸಕರಿಂದ ರಾಜೀನಾಂಎ ಕೊಡಿಸಿದರಾಯ್ತು ಎಂದು ಕುಮಾರಸ್ವಾಮಿ ಮಾರ್ಮಿಕವಾಗಿ ಹೇಳಿದರು.

loader