ವಿಧಾನಸೌಧದ ಬಾಂಕ್ವೆಟ್ಹಾಲ್ನಲ್ಲಿ ವಾಲ್ಮಿಕಿ ಜಯಂತಿ ಅಂಗವಾಗಿ ಕನ್ನಡಪ್ರಭ ತಂದಿರುವ ವಿಶೇಷ ಸಂಚಿಕೆಯನ್ನು ಅನಾವರಣಗೊಳಿಸಿದರು
ಬೆಂಗಳೂರು(ಅ.15):ವಿಧಾನಸೌಧದಲ್ಲಿ ನಡೆಯುತ್ತಿರುವ ವಾಲ್ಮಿಕಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುವರ್ಣ ನ್ಯೂಸ್'ನ ಸೋದರ ಪತ್ರಿಕೆ ಕನ್ನಡಪ್ರಭದ ವಿಶೇಷ ಸಂಚಿಕೆಯನ್ನು ಅನಾವರಣಗೊಳಿಸಿದರು. ವಿಧಾನಸೌಧದ ಬಾಂಕ್ವೆಟ್ಹಾಲ್ನಲ್ಲಿ ವಾಲ್ಮಿಕಿ ಜಯಂತಿ ಅಂಗವಾಗಿ ಕನ್ನಡಪ್ರಭ ತಂದಿರುವ ವಿಶೇಷ ಸಂಚಿಕೆಯನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ವೀರಣ್ಣ ಅವರಿಗೆ 2015 -16 ರ ಸಾಲಿನ ವಾಲ್ಮೀಕಿ ಮಹರ್ಷಿ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ಸಚಿವ ಆಂಜನೇಯ,ಉಮಾಶ್ರೀ, ಮೇಯರ್ ಪದ್ಮಾವತಿ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು.
