ಗುಂಡ್ಲುಪೇಟೆಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಒಬ್ಬ ಹುಚ್ಚ ಎಂದಿದ್ದಕ್ಕೆ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಎಂ.ಪ್ರಣಯ್ ದೂರು ದಾಖಲಿಸದ್ದಾರೆ.
ಚಾಮರಾಜನಗರ(ಮಾ.12): ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ.ಇಬ್ರಾಹಿಂ ವಿರುದ್ದ ಗುಂಡ್ಲುಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಗುಂಡ್ಲುಪೇಟೆಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಒಬ್ಬ ಹುಚ್ಚ ಎಂದಿದ್ದಕ್ಕೆ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಎಂ.ಪ್ರಣಯ್ ದೂರು ದಾಖಲಿಸದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಇಬ್ರಾಹಿಂ ನರೇಂದ್ರಮೋದಿ ಆಡಳಿತ ವೈಖರಿ ಟೀಕಿಸುವ ಭರದಲ್ಲಿ ಹುಚ್ಚನಿಗೆ ಕೈಗೆ ಕತ್ತಿ ಕೊಟ್ಟು ಶೇವಿಂಗ್ ಮಾಡಿಸಿಕೊಳ್ಳಲು ಕುಳಿತುಕೊಂಡರೆ ಏನಾಗಬೇಡ ಪರಿಸ್ಥಿತಿ ಎಂದು ಹೇಳಿದ್ದರು.
ಚುನಾವಣಾಧಿಕಾರಿಯಿಂದ ಅನುಮತಿ ಪಡೆಯದೆ ಬೈಕ್ ರಾಲಿ ನಡೆಸಿದ್ದಕ್ಕೆ ಪ್ರಕರಣ ದಾಖಲಾಗುವ ಸಾದ್ಯತೆ ಇದೆ.
