ನಾಳೆ ಅಂದರೆ ಡಿಸೆಂಬರ್ 16ರಂದು   ಮುಖ್ಯಮಂತ್ರಿ ಎಚ್..ಡಿ. ಕುಮಾರಸ್ವಾಮಿ ಅವರ ಹುಟ್ಟುಹಬ್ಬ. ಈ ಬಾರಿಯ ತಮ್ಮ ಜನ್ಮದಿನವನ್ನು ಕುಮಾರಸ್ವಾಮಿ ಅವರು ಕುಟುಂಬದ ಜೊತೆ ಆಚರಿಸಿಕೊಳ್ಳಲಿದ್ದಾರೆ. 

ಬೆಂಗಳೂರು, (ಡಿ.15) : ಮುಖ್ಯಮಂತ್ರಿ ಎಚ್..ಡಿ. ಕುಮಾರಸ್ವಾಮಿ ಅವರು ಡಿಸೆಂಬರ್ 16ರಂದು ತಮ್ಮ ಹುಟ್ಟುಹಬ್ಬದಂದು ಕುಟುಂಬದವರೊಂದಿಗೆ ಸಮಯ ಕಳೆಯಲು ನಿರ್ಧರಿಸಿದ್ದಾರೆ.

ಇದ್ಬೆಂರಿಂದ ಗಳೂರಿನಲ್ಲಿರುವ ಜೆ.ಪಿ. ನಗರದ ತಮ್ಮ ನಿವಾಸದಲ್ಲಿ ಅವರು ಲಭ್ಯರಿರುವುದಿಲ್ಲ. ಹಾಗಾದ್ರೆ ಕುಮಾರಸ್ವಾಮಿ ಅವರು ಕುಟುಂಬದ ಜೊತೆ ಎಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರೆ ಎನ್ನುವುದು ಮಾತ್ರ ಗುಪ್ತವಾಗಿದೆ.

 ಹಿತೈಷಿಗಳು, ಅಭಿಮಾನಿಗಳು ಕುಮಾರಸ್ವಾಮಿ ಅವರನ್ನು ಬೆಳಗಾವಿ ಅಧಿವೇಶನದ ನಂತರ ಭೇಟಿ ಕೋರಿದ್ದಾರೆ. ಇನ್ನು ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಯಾವುದೇ ಕಾರಣಕ್ಕೂ ಫ್ಲೆಕ್ಸ್, ಬ್ಯಾನರ್ ಹಾಕದಂತೆ ಅವರು ಮನವಿ ಮಾಡಿದ್ದಾರೆ.

 'ನಿಮ್ಮ ಶುಭ ಹಾರೈಕೆಗಳೇ ನನಗೆ ಶ್ರೀರಕ್ಷೆ. ಫ್ಲೆಕ್ಸ್ ಬ್ಯಾನರ್ ಅಳವಡಿಸಿ ಊರಿನ ಅಂದ ಹಾಳು ಮಾಡಬೇಡಿ. ಪರಿಸರ ಕಾಳಜಿ ಮೆರೆದಲ್ಲಿ ಅದೇ ಅತ್ಯುತ್ತಮ ಸಂದೇಶ' ಎಂದು ಅವರು ವಿನಂತಿಸಿದ್ದಾರೆ.