Asianet Suvarna News Asianet Suvarna News

'ಬಿಜೆಪಿಗೆ ಶ್ರಾವಣ..ಅಮೆರಿಕದಿಂದಲೇ ರಾಜೀನಾಮೆ ಕೊಟ್ಟು ಬರೋದು ಒಳ್ಳೆದು!'

ಸಿಎಂ ಕುಮಾರಸ್ವಾಮಿ ಅಮೆರಿಕದಿಂದಲೇ ರಾಜೀನಾಮೆ ರವಾನಿಸಲಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸವಾಲೆಸೆದಿದ್ದಾರೆ.

CM HD Kumaraswamy Must Resign Vijayapura BJP MLA Basanagouda Patil Yatnal
Author
Bengaluru, First Published Jul 6, 2019, 4:28 PM IST
  • Facebook
  • Twitter
  • Whatsapp

ಬೆಂಗಳೂರು(ಜು. 06)   ಅಮೇರಿಕಾದಲ್ಲಿರುವ ಸಿಎಂ ಕುಮಾರಸ್ವಾಮಿ ಅಲ್ಲಿಂದಲೇ ರಾಜೀನಾಮೆ ನೀಡಲಿ ಎಂದು ಬಿಜೆಪಿ ಶಾಸಕ  ಬಸನಗೌಡ ಪಾಟೀಲ್ ಯತ್ನಾಳ್  ಆಗ್ರಹಿಸಿದ್ದಾರೆ.

ಅಮೆಕಾದಿಂದಲೇ ಸಿಎಂ ಕುಮಾರಸ್ವಾಮಿ ಪ್ಯಾಕ್ಸ್ ಮೂಲಕ ರಾಜೀನಾಮೆ ರವಾನಿಸಲಿ. ಸರ್ಕಾರ ಅಸ್ಥಿರವಾಗಿದೆ. ರಾಜ್ಯಪಾಲರಿಗೆ ರಾಜೀನಾಮೆ ಪತ್ರ ರವಾನಿಸಿ ಬಿಜೆಪಿ ಸರ್ಕಾರ ರಚಿಸಲು ಅನುವು ಮಾಡಿಕೊಡಬೇಕು ಎಂದು ಯತ್ನಾಳ್ ಹೇಳಿದ್ದಾರೆ.

ರಾಜೀನಾಮೆ ಪರ್ವದ ನಡುವೆ ಟ್ರಬಲ್ ಶೂಟರ್‌ ಡಿಕೆಶಿಗೆ ಮತ್ತೊಂದು ಟ್ರಬಲ್

ಕಾಂಗ್ರೆಸ್  ಶಾಸಕರಿಗೆ ಅಸಮಾಧಾನವಿದೆ. ಹಲವು ಸೀನಿಯರ್ಸ್ ಗಳಿಗೆ ಮೈತ್ರಿ ಸರ್ಕಾರದಲ್ಲಿ ಸಮಾಧಾನವಿಲ್ಲ. ಅಸಮಧಾನ ಇರುವ ದೊಡ್ಡ ಗುಂಪೆ ಕಾಂಗ್ರೆಸ್ ನಲ್ಲಿದೆ. ಆರ್ .ವಿ.ದೇಶಪಾಂಡೆ ಸಚಿವರಾಗಿದ್ದರೂ  ಅವರಿಗೆ ಅಸಮಧಾನವಿದೆ. ಇಂಥ ಪರಿಸ್ಥಿತಿಯಲ್ಲಿ ಸರ್ಕಾರ ಉಳಿಯಲು ಸಾಧ್ಯವಿಲ್ಲ ಎಂದು ಹೇಳಿದರು.

ಆಷಾಡದಲ್ಲಿ ಶುಭಕಾರ್ಯ ಮಾಡಲ್ಲ. ಶ್ರಾವಣದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ. ಶ್ರಾವಣದಲ್ಲಿ ಏನಾಗುತ್ತೆ ನೋಡಬೇಕು. ಭವಿಷ್ಯ ಹೇಳೋದನ್ನ ಬಿಟ್ಟಿದ್ದೀನಿ. ಆಶ್ಚರ್ಯಕರವಾದ ರೀತಿಯಲ್ಲಿ ಹಿರಿಯ ಶಾಸಕರು ರಾಜೀನಾಮೆ ನೀಡ್ತಾರೆ.ಕಾಂಗ್ರೆಸ್ ನಿಷ್ಠಾವಂತ ಶಾಸಕರು ರಾಜೀನಾಮೆ ನೀಡ್ತಾರೆ. ಕಾಂಗ್ರೆಸ್ ಬಿಡೊಲ್ಲ ಅನ್ನೋರು ಕಾಂಗ್ರೆಸ್ ಬಿಡಲಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದರು.

ಆಪರೇಷನ್ ಕಮಲದಲ್ಲಿ ಕೋಟ್ಯಂತರ ಹಣ ನೀಡಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ ರಾಜ್ಯ ಸರ್ಕಾರ ಬಿಜೆಪಿ ಹಣ ನೀಡಿ ಶಾಸಕರನ್ನ ಸೆಳೆದಿರುವ ಬಗ್ಗೆ ತನಿಖೆ ಮಾಡಲಿ. ಅಧಿಕಾರ, ಗೃಹ ಇಲಾಖೆ ಮೈತ್ರಿ ಸರ್ಕಾರದ ಕೈಯಲ್ಲಿ ಇದೆ. ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ಬಿಜೆಪಿ ಹಣದ ಆಮಿಚ ಒಡ್ಡುವ ಕೆಲಸ ಮಾಡಿಲ್ಲ ಎಂದು ಹೇಳಿದರು.

ಎಐಸಿಸಿ ಸಂಪೂರ್ಣ ಅಸ್ತಿತ್ವ ಕಳೆದುಕೊಂಡಿದೆ. ರಾಹುಲ್ ಗಾಂಧಿ ರಾಜೀನಾಮೆ ನೀಡಿದ್ಮೇಲೆ ಕಾಂಗ್ರೆಸ್ ದಿವಾಳಿ ಆಗಿದೆ. ಕಾಂಗ್ರೆಸ್ ಶಾಸಕರ ಭವಿಷ್ಯ ಬಿಜೆಪಿ ಕಡೆಗೆ ಇದೆ, ಅದಕ್ಕಾಗಿ ಬಿಜೆಪಿ ಬರುತ್ತಿದ್ದಾರೆ.  ಭವಿಷ್ಯಕ್ಕಾಗಿ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬಂದ್ರೆ ಅಚ್ಚರಿ ಪಡಬೇಕಿಲ್ಲ. ವಿಜಯಪುರ ಜಿಲ್ಲೆಯಲ್ಲಿ ಬಿಜೆಪಿಗೆ ಯಾರು ಬರ್ತಾರೆ ಅನ್ನೋದನ್ನ ಕಾಲ ನಿರ್ಣಯಿಸಲಿದೆ. ದೇವೆಗೌಡರು ಮಧ್ಯಂತರ ಚುನಾವಣೆ ಅಂದ್ರೇ ಕಾಂಗ್ರೆಸ್ ಹಾಗೂ ಜೆಡಿಎಸ್ ಖಾಲಿಯಾಗಲಿದೆ ಎಂದು ಭವಿಷ್ಯ ನುಡಿದರು.

ಎಲ್ಲ ಶಾಸಕರು ಬಿಜೆಪಿಗೆ ಬಂದು ಬಿಡ್ತಾರೆ. ಕಾಂಗ್ರೆಸ್, ಜೆಡಿಎಸ್ ನ ಶಾಸಕರಿಗೆ ಚುನಾವಣೆ ಬೇಕಾಗಿಲ್ಲ ಎಂದು ಹೇಳಲು ಯತ್ನಾಳ್ ಮರೆಯಲಿಲ್ಲ

CM HD Kumaraswamy Must Resign Vijayapura BJP MLA Basanagouda Patil Yatnal

Follow Us:
Download App:
  • android
  • ios