ರಾಜ್ಯ ಕಾಂಗ್ರೆಸ್ ನಾಯಕರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಏಕಾ ಏಕಿ ಬಿಗ್ ಶಾಕ್ ನೀಡಿದ್ದಾರೆ. ದಿಲ್ಲಿಗೆ ತೆರಳಿದ ವೇಳೆ ರಾಹುಲ್ ಭೇಟಿ ಮಾಡುವುದಿಲ್ಲ ಎಂದು ಹೇಳಿದ್ದ ಅವರು ಏಕಾ ಏಕಿ ಭೇಟಿ ಮಾಡಿರುವುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ. 

ಬೆಂಗಳೂರು : ರಾಜ್ಯ ಕಾಂಗ್ರೆಸ್ ನಾಯಕರಿಗೆ ಸಿಎಂ ಕುಮಾರಸ್ವಾಮಿ ಬಿಗ್ ಶಾಕ್ ನೀಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನ ಭೇಟಿ ಮಾಡುವುದಿಲ್ಲ ಎಂದು ಹೇಳಿದ್ದು ಇದೀಗ ದಿಢೀರ್ ಭೇಟಿ ಮಾಡಿದ್ದಾರೆ. 

ದಿಢೀರ್ ರಾಹುಲ್ ರನ್ನು ಎಚ್ ಡಿಕೆ ಭೇಡಿ ಮಾಡಿದ್ದೇಕೆ ಎನ್ನುವ ಪ್ರಶ್ನೆ ಇದೀಗ ಮೂಡಿದ್ದು, ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಈ ಬೇಟಿ ಕುತೂಹಲ ಕೆರಳಿಸಿದೆ.

ಸಂಪುಟ ವಿಸ್ತರಣೆ ವಿಳಂಬವಾಗಿತ್ತಿರುವ ಬಗ್ಗೆ ರಾಹುಲ್ ಗಾಂಧಿ ಜೊತೆ ಸಿಎಂ ಚರ್ಚೆ ನಡೆಸಿದ್ದು, ರಾಮನಗರ, ಜಮಖಂಡಿ ಉಪಚುನಾವಣೆ‌ ದಿನಾಂಕ ಘೋಷಣೆಯಾಗಲಿದ್ದು ಸಂಪುಟ ವಿಸ್ತರಿಸಿದರೆ ಸರ್ಕಾರಕ್ಕೆ ತೊಂದರೆಯಾಗಬಹುದು ಎಂದೂ ಕೂಡ ಹೇಳಲಾಗಿದೆ. 

ಈ ಸಮಯದಲ್ಲಿ ಸಂಪುಟ ವಿಸ್ತರಣೆ ಮಾಡಿದರೆ ಕಾಂಗ್ರೆಸ್ ನಲ್ಲಿ ಬಂಡಾಯ ಏಳುವ ಸಾಧ್ಯತೆ ಇದೆ. ಇದು ಬೈ ಎಲೆಕ್ಷನ್ ಫಲಿತಾಂಶದ ಮೇಲೂ ಪರಿಣಾಮ‌ ಬೀರಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಲೋಕಸಭಾ ಚುನಾವಣೆ ಸಮೀಪ ಇಟ್ಟುಕೊಂಡು ಕೈ ನಾಯಕರ ನಡೆ ನಮಗೆ ಹಿನ್ನಡೆಯಾಗುತ್ತಿದೆ. ರಾಜ್ಯ ಕೈ ನಾಯಕರಿಗೆ ಬುದ್ಧಿ ಹೇಳುವಂತೆ ರಾಹುಲ್ ಗಾಂಧಿಗೆ ಸಿಎಂ ಮನವಿ ಮಾಡಿದ್ದಾರೆ. 

ಕಾಂಗ್ರೆಸ್ ನೊಂದಿಗಿನ ಮಹಾಮೈತ್ರಿಯಿಂದ ಬಿಎಸ್ ಪಿ ಹೊರಬಂದ ಹಿನ್ನಲೆ, ಬಿಎಸ್ ಪಿ ಜೊತೆಗಿನ ಮೈತ್ರಿಯನ್ನು ಮುರಿದುಕೊಳ್ಳುವಂತೆ ಸಿಎಂ ಗೆ ರಾಹುಲ್ ಸೂಚನೆ ನೀಡಿದ್ದಾರೆ. ಸಚಿವ ಎನ್. ಮಹೇಶ್ ಹೇಳಿಕೆಗಳು ಕಾಂಗ್ರೆಸ್ ಜೆಡಿಎಸ್ ಗೆ ಡ್ಯಾಮೇಜ್ ಮಾಡುತ್ತಿದೆ. ಎನ್ ಮಹೇಶ್ ರನ್ನ ಸಂಪುಟದಿಂದ ಕೈ ಬಿಟ್ಟು, ಲೋಕಸಭಾ ತಯಾರಿ ಮಾಡಿಕೊಳ್ಳಿ ಎಂದೂ ಕೂಡ ಹೇಳಿದ್ದಾರೆ ಎನ್ನಲಾಗಿದೆ.