ರಾಜ್ಯದಲ್ಲಿ ಟಿಪ್ಪು ಹೆಸರಲ್ಲಿ ರಾಜಕೀಯ ಶುರುವಾಗಿದೆ. ಟಿಪ್ಪು ಆಚರಣೆ ಆಮಂತ್ರಣ ಪತ್ರಕ್ಕೆ ನನ್ನ ಹೆಸರು ಬೇಡ ಎಂದಿದ್ದ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿಕೆಗೆ ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರು(ಅ.21): ರಾಜ್ಯದಲ್ಲಿ ಟಿಪ್ಪು ಹೆಸರಲ್ಲಿ ರಾಜಕೀಯ ಶುರುವಾಗಿದೆ. ಟಿಪ್ಪು ಆಚರಣೆ ಆಮಂತ್ರಣ ಪತ್ರಕ್ಕೆ ನನ್ನ ಹೆಸರು ಬೇಡ ಎಂದಿದ್ದ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿಕೆಗೆ ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತಾಗಿ ಮಾತನಾಡಿದ ಸಿಎಂ ಸಿದ್ಧರಾಮಯ್ಯ ಶಿಷ್ಟಾಚಾರದ ಪ್ರಕಾರ ನಾವು ಕರೆಯಲೇಬೇಕು. ಕೇಂದ್ರ ಸಚಿವರಾಗಿದ್ದರಿಂದ ಅನಂತಕುಮಾರ್ ಹೆಗಡೆ ಬರಲೇಬೇಕು. ಟಿಪ್ಪು ಬಗ್ಗೆ ತಿಳಿದುಕೊಂಡು ಮಾತನಾಡಬೇಕು. ಅದು ಬಿಟ್ಟು ರಾಜಕೀಯ ಪ್ರೇರಿತವಾಗಿ ಹೇಳಿಕೆ ಕೊಡುವುದು ಸರಿಯಲ್ಲ. ಟಿಪ್ಪು ಜಯಂತಿ ಆಚರಣೆಗೆ ಅವರನ್ನು ಕರೆಯುತ್ತೇವೆ' ಎಂದಿದ್ದಾರೆ
