ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಇನ್ನು ಮುಂದೆ ಡಾ ರಾಜ್ ಕುಮಾರ್ ಜನ್ಮ ದಿನಾಚರಣೆಯಾದ ಏ.24ರಂದೆ ಪ್ರತಿ ವರ್ಷ ಪ್ರದಾನ ಮಾಡಲಾಗುವುದು ಮತ್ತು ಪ್ರತಿ ವರ್ಷವೂ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗುವುದು
ಬೆಂಗಳೂರು(ನ.13): ಕನ್ನಡ ಚಲನಚಿತ್ರಗಳಿಗೆ ರಾಜ್ಯ ಸರ್ಕಾರ ನೀಡುವ ಸಹಾಯ ಧನವನ್ನು 100 ಚಿತ್ರಗಳಿಂದ 125 ಚಿತ್ರಗಳಿಗೆ ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಡಾ ಬಾಬುರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಸಮಾವೇಶ ಸಭಾಂಗಣದಲ್ಲಿ ಆಯೋಜಿಸಿದ್ದ 2014 ಮತ್ತು 15ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿ, ರಾಜ್ಯದಲ್ಲಿ ಅತಿಹೆಚ್ಚು ಸಂಖ್ಯೆಯ ಸಾಮಾಜಿಕ ಕಳಕಳಿಯ ಚಿತ್ರಗಳು ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನೀಡುತ್ತಿರುವ ಸಹಾಯಧನ ನೀಡುವ ಚಿತ್ರವನ್ನು 125ಕ್ಕೆ ಏರಿಸಲಾಗುವುದು. ಮುಂಬರುವ ವರ್ಷದಿಂದಲೇ ಈ ಏರಿಕೆ ಮಾಡಲಾಗವುದು ಎಂದರು.
ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಇನ್ನು ಮುಂದೆ ಡಾ ರಾಜ್ ಕುಮಾರ್ ಜನ್ಮ ದಿನಾಚರಣೆಯಾದ ಏ.24ರಂದೆ ಪ್ರತಿ ವರ್ಷ ಪ್ರದಾನ ಮಾಡಲಾಗುವುದು ಮತ್ತು ಪ್ರತಿ ವರ್ಷವೂ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗುವುದು ಎಂದರು.
ಸಹಾಸ ಕಲಾವಿದರ ದುರಂತ-ನಿರ್ಲಕ್ಷ್ಯ ಕಾರಣ
ಇತ್ತಿಚೆಗೆ ಬೆಂಗಳೂರು ಹೊರವಲಯದ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಚಿತ್ರ ನಿರ್ಮಾಣದ ವೇಳೆ ನಡೆದ ದುರಂತಕ್ಕೆ ನಿರ್ಮಾಪಕ, ನಿರ್ದೇಶಕ ಹಾಗೂ ಸಹಾಸ ನಿರ್ದೇಶಕರ ನಿರ್ಲಕ್ಷ್ಯವೇ ಕಾರಣವಾಗಿದೆ. ಉದಯೋನ್ಮಕ ಕಲಾವಿದರಾದ ಅನಿಲ್ ಮತ್ತು ಉದಯ್ ಈ ನಿರ್ಲಕ್ಷ್ಯದಿಂದಾಗಿ ಪ್ರಾಣ ಕಳೆದುಕೊಳ್ಳುವಂತಾಗಿದೆ. 100 ಅಡಿ ಎತ್ತರದಿಂದ ಧುಮುಕುವ ವೇಳೆ ಸೂಕ್ತ ಮುಂಜಾಗರೂಕತ ಕ್ರಮಗಳನ್ನು ಕೈಗೊಂಡಿರಲಿಲ್ಲ. ಇಲ್ಲಿ ನಿರ್ದೇಶಕರ ಸ್ಪಷ್ಟ ನಿರ್ಲಕ್ಷ್ಯ ಮೇಲ್ನೋಟಕ್ಕೆ ಕಂಡು ಬರುತ್ತಿದೆ.ಅನಿಲ್ ಉದಯ್ ಕುಟಂಬಕ್ಕೆ ರಾಜ್ಯ ಸರ್ಕಾರದಿಂದ ತಲಾ 5 ಲಕ್ಷ ರು. ಪರಿಹಾರವನ್ನು ನೀಡುವುದಾಗಿ ಸಿಎಂ ಘೋಷಿಸಿದರು.
ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ಈ ದಿನಮಾನದ ಚಲನಚಿತ್ರ ನಟ, ನಟಿಯರು ಡಾ ರಾಜ್ ಕುಮಾರ್ ಮುಂತಾದವರು ಪ್ರದರ್ಶಿದ ಸಾಮಾಜಿಕ ಕಳಕಳಿಯನ್ನು ಪ್ರದರ್ಶಿಸಬೇಕಾದ ಅಗತ್ಯತೆ ಇದೆ.ನಾಡಿನ ಕಲೆ ಮತ್ತು ಸಂಸ್ಕೃತಿ ಇತಿಹಾಸಗಳನ್ನು ಹೊಸತನದೊಂದಿಗೆ ಸೇರಿಸಿ ಚಿತ್ರ ನಿರ್ಮಿಸಬೇಕೆಂದರು.
ಸಚಿವ ಕೃಷ್ಣಭೈರೇಗೌಡ, ರಾಜ್ಯ ಚಲನಚಿತ್ರ ಅಕಾಡಮಿ ಅಧ್ಯಕ್ಷ ರಾಜೇಂದ್ರಸಿಂಗ್ ಬಾಬು, ಮೇಯರ್ ಜಿ.ಪದ್ಮಾವತಿ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದ ಮತ್ತಿತರರು ಇದ್ದರು.
ಇನ್ಮುಂದೆ ಪ್ರಶಸ್ತಿಗೂ ಮುನ್ನ ಭಾಷಣ
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಆರಂಭಿಸುವಾಗ ಸಭಾಂಗಣ ಹಾಗೂ ಬಾಲ್ಕನಿಯ ಬಹುತೇಕ ಎಲ್ಲಾ ಕುರ್ಚಿಗಳು ಖಾಲಿಯಾಗಿದ್ದವು. ಪ್ರಶಸ್ತಿ ಪುರಸ್ಕೃತರು, ಮಾಧ್ಯಮದವರು ಅಕಾರಿಗಳನ್ನು ಬಿಟ್ಟರೆ ಬೆರಣಿಕೆಯ ಮಂದಿ ಮಾತ್ರ ಹಾಜರಿದ್ದರು. ಇದರಿಂದ ತೀವ್ರ ನಿರಾಶೆಗೊಂಡಂತೆ ಕಂಡು ಬಂದ ಸಿಎಂ ಪ್ರಶಸ್ತಿ ಪ್ರದಾನ ಆಗುವವರೆಗೂ ಚಿತ್ರ ನಟ,ನಟಿಯರ ಅಭಿಮಾನಿಗಳ ಸಾಗರವೇ ಇಲ್ಲಿತ್ತು. ಆದರೆ, ಪ್ರಶಸ್ತಿ ನೀಡಿದ ಬಳಿಕ ಅಭಿಮಾನಿಗಳೆಲ್ಲ ಕರಗಿ ಹೋಗಿದ್ದಾರೆ. ಹೀಗಾಗಿ ನಾನು ಹೆಚ್ಚು ಮಾತನಾಡುವುದಿಲ್ಲವೆಂದು ಚುಟುಕಾಗಿ ಭಾಷಣ ಮುಗಿಸಿದರು. ಸಮಾರಂಭದಲ್ಲಿ ನಟ, ನಟಿಯರಿಂದಾಗಲಿ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಯಾಗದೆ ಇದದ್ದು ಚಲನಚಿತ್ರ ಅಭಿಮಾನಿಗಳ ತೀವ್ರ ನಿರಾಶೆಗೆ ಕಾರಣವಾಗಿತ್ತು.
2014ನೇ ಸಾಲಿನ ಜೀವಿತಾವಧಿ ಸಾಧನೆ ಪ್ರಶಸ್ತಿಗಳು
ಡಾ. ರಾಜ್ ಕುಮಾರ್ ಪ್ರಶಸ್ತಿ - ಬಸಂತ್ ಕುಮಾರ್
ಡಾ.ವಿಷ್ಣುವರ್ಧನ್ ಪ್ರಶಸ್ತಿ - ಸುರೇಶ್ ಅರಸ್
ಪುಟ್ಟಣ್ಣ ಕಣಗಾಲ್ ಪ್ರಶಸ್ತಿ - ಬರಗೂರು ರಾಮಚಂದ್ರಪ್ಪ
2015ನೇ ಸಾಲಿನ ಜೀವಿತಾವಧಿ ಸಾಧನೆ ಪ್ರಶಸ್ತಿಗಳು
ಡಾ.ರಾಜ್ ಕುಮಾರ್ ಪ್ರಶಸ್ತಿ - ಶ್ರೀಮತಿ ಹರಿಣಿ
ಪುಟ್ಟಣ್ಣ ಕಣಗಾಲ್ ಪ್ರಶಸ್ತಿ - ನಾಗತಿಹಳ್ಳಿ ಚಂದ್ರಶೇಖರ್
ಡಾ. ವಿಷ್ಣುವರ್ಧನ್ ಪ್ರಶಸ್ತಿ - ರಾಜನ್
2014ನೇ ಸಾಲಿನ ಅತ್ಯುತ್ತಮ - ಸಂಚಾರಿ ವಿಜಯ್
ಅತ್ಯುತ್ತಮ ನಟಿ - ಲಕ್ಷ್ಮೀ ಗೋಪಾಲಸ್ವಾಮಿ
2015ನೇ ಸಾಲಿನ ಅತ್ಯುತ್ತಮ ನ - ವಿಜಯ್ ರಾಘವೇಂದ್ರ
ಅತ್ಯುತ್ತಮ ನಟಿ - ಮಾಲಾಶ್ರೀ
2014ನೇ ಸಾಲಿನ ಅತ್ಯುತ್ತಮ ಚಲನಚಿತ್ರ - ಹರಿವು
2015ನೇ ಸಾಲಿನ ಅತ್ಯುತ್ತಮ ಚಲನಚಿತ್ರ - ತಿಥಿ
