ಜನರನ್ನು ನಗೆಗಡಲಲ್ಲಿ ತೇಲಿಸಿದ ಸಿಎಂ 'ವಡೆ' ಪ್ರಸಂಗ

First Published 11, Jan 2018, 6:27 PM IST
CM Comedy Scene at Nanjangoodu
Highlights

ಕೇಂದ್ರ ಸರ್ಕಾರ ನಮಗೆ ಅನುದಾನವನ್ನು ಭಿಕ್ಷೆ ಕೊಟ್ಟಿದ್ದ್ಯಾ. ಅನುದಾನದ ಲೆಕ್ಕ ಕೊಡಿ ಎಂದು  ಅಮಿತ್ ಶಾ ಕೇಳ್ತಾರೆ. ನಾನೇಕೆ ಅಮಿತ್ ಶಾ ಗೆ ಲೆಕ್ಕ ಕೊಡಲಿ, ನಾನು ಲೆಕ್ಕ ಕೊಡಬೇಕಿರೋದು ರಾಜ್ಯದ 6.5. ಕೋಟಿ ಜನಕ್ಕೆ.

ನಂಜನಗೂಡು(ಜ.11): ಸರ್ಕಾರಿ ಕಾರ್ಯಕ್ರಮದಲ್ಲಿ ಸಿಎಂ ವಡೆ ಮಾತು ಜನರನ್ನು ನಗೆಗಡಲಲ್ಲಿ ತೇಲಿಸಿದ ಘಟನೆ ಸರಗೂರಿನಲ್ಲಿ ನಡೆಯಿತು.

ಸಿಎಂ ಭಾಷಣ ಮಾಡುವಾಗ ಕಾರ್ಯಕರ್ತನೊಬ್ಬ ಸಿದ್ದರಾಮಯ್ಯ'ನವರಿಗೆ ತಿನ್ನಲು ವಡೆ ತಂದು ಕೊಟ್ಟ. ಇದರಿಂದ ಸ್ವಲ್ಪ ಸಿಡಿಮಿಡಿಗೊಂಡ ಮುಖ್ಯಮಂತ್ರಿಗಳು' ಏ ತಗೊಂಡ್ ಹೋಗೋ. ಕುಳಿತ್ತಿದ್ದಾಗ ವಡೆ ಕೊಡದೆ, ಭಾಷಣ ಮಾಡುವಾಗ ತಂದಾವ್ನೆ.' ಏ ಮಹದೇವಪ್ಪ ನಾನು ಭಾಷಣ ಮಾಡುವಾಗ ವಡೆ ತರಸ್ತೀಯಾ' ಎಂದಾಗ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನರು ನಗೆಗಡಲಲ್ಲಿ ತೇಲಿದರು.

ವಿರೋಧ ಪಕ್ಷದ ನಾಯಕರಿಗೆ ಸಿಎಂ ಪಂಥಾಹ್ವಾನ

ಈ ಸಂದರ್ಭದಲ್ಲಿ  ಮಾತನಾಡಿದ ಅವರು   ಬಿಜೆಪಿ ನಾಯಕರಿಗೆ ಪಂಥಾಹ್ವಾನ ನೀಡಿದರು. ಬನ್ನಿ ಒಂದೇ ವೇದಿಕೆಯಲ್ಲಿ ಚರ್ಚೆ ಮಾಡೋಣ. ಸುಳ್ಳನ್ನೇ ಹೇಳಿ ಬದುಕಲು ಸಾಧ್ಯವಿಲ್ಲ. ಹೀಗಂತ ಅತಿ ಹೆಚ್ಚು ಸತ್ಯವನ್ನು ಹೇಳಬಾರದು. ಕೇಂದ್ರ ಸರ್ಕಾರ ನಮಗೆ ಅನುದಾನವನ್ನು ಭಿಕ್ಷೆ ಕೊಟ್ಟಿದ್ದ್ಯಾ. ಅನುದಾನದ ಲೆಕ್ಕ ಕೊಡಿ ಎಂದು  ಅಮಿತ್ ಶಾ ಕೇಳ್ತಾರೆ. ನಾನೇಕೆ ಅಮಿತ್ ಶಾ ಗೆ ಲೆಕ್ಕ ಕೊಡಲಿ, ನಾನು ಲೆಕ್ಕ ಕೊಡಬೇಕಿರೋದು ರಾಜ್ಯದ 6.5. ಕೋಟಿ ಜನಕ್ಕೆ. ವೇದಿಕೆಯಲ್ಲಿ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದರು.

ಶಾ'ಗೆ ಏನು ಗೊತ್ತಿಲ್ಲ

ಅಮಿತ್ ಶಾ ಗೆ ಏನು ಗೊತ್ತಿಲ್ಲ. ಸಂವಿಧಾನದ ಗೊತ್ತಿದ್ಯೊ ಇಲ್ಲವೋ ಪಾಪ. ಎನಾದ್ರೂ ಮಾತನಾಡಿದ್ರೆ ಜನ ನಂಬಿಕೊಳ್ತಾರೆ ಅಂತಾ ಹೇಳ್ತಾರೆ. ಆರ್ಥಿಕ ತಜ್ಞರ ಹಾಗೂ ಪ್ರಧಾನಿಯಾಗಿದ್ದ ಸಿಂಗ್ ಆರ್ಥಿಕ ನಿರ್ವಹಣೆಯಲ್ಲಿ ಕರ್ನಾಟಕ ನಂ.1 ಅಂತಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವ್ರು ರಾಜ್ಯ ಸರ್ಕಾರ ಆರ್ಥಿಕ ದಿವಾಳಿ, ದಿವಾಳಿ ಅಂತಾರೆ. ಎಲ್ಲಿ ದಿವಾಳಿಯಾಗಿದೆ ರಾಜ್ಯ ಸರ್ಕಾರ. ವಿರೋಧ ಪಕ್ಷದ ನಾಯಕರಿಗೆ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.

loader