ನಿನ್ನೆ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಕಾಂಗ್ರೆಸ್ ನಾಯಕರನ್ನು ಟೀಕಿಸುತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಟಿಪ್ಪು ರಕ್ತ ಹರಿಯುತ್ತಿದೆ ನನ್ನ ಮೈಯಲ್ಲಿ ಕನಕದಾಸರ ರಕ್ತ ಹರಿಯುತ್ತಿದೆ'ಎಂದು ಹೇಳಿಕೆ ನೀಡಿದ್ದರು

ಕೊಪ್ಪಳ(ನ.12): ಚುನಾವಣೆ ಹತ್ತಿರ ಬರುತ್ತಿದ್ದಂತೆ ಎಲ್ಲ ಪಕ್ಷಗಳ ನಾಯಕರು ಒಬ್ಬರೊಬ್ಬರನ್ನು ನಿಂದಿಸುವ ರಾಜಕೀಯ ಶುರುವಿಟ್ಟುಕೊಂಡಂತಿದೆ. ಮಂಗಳೂರಿನಲ್ಲಿ ನಡೆದ ಪಕ್ಷದ ಪರಿವರ್ತನಾ ಸಮಾವೇಶದಲ್ಲಿ ನಿನ್ನೆ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಕಾಂಗ್ರೆಸ್ ನಾಯಕರನ್ನು ಟೀಕಿಸುತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಟಿಪ್ಪು ರಕ್ತ ಹರಿಯುತ್ತಿದೆ ನನ್ನ ಮೈಯಲ್ಲಿ ಕನಕದಾಸರ ರಕ್ತ ಹರಿಯುತ್ತಿದೆ'ಎಂದು ಹೇಳಿಕೆ ನೀಡಿದ್ದರು.

ಇಂದು ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ 'ನನ್ನ ಮೈಯಲ್ಲಿ ಹರಿಯುತ್ತಿರುವುದು ಮನುಷ್ಯರ ರಕ್ತ ಈಶ್ವರಪ್ಪ ಅವರಲ್ಲಿ ಪಿಶಾಚಿ ರಕ್ತ ಹರಿಯುತ್ತಿದೆ' ಎಂದು ತಿರುಗೇಟು ನೀಡಿದ್ದಾರೆ. ಇತ್ತೀಚಿಗಷ್ಟೆ ಸಿದ್ದರಾಮಯ್ಯ ಹಾಗೂ ಬಿ.ಎಸ್. ಯಡಿಯೂರಪ್ಪ ಕೂಡ ಒಬ್ಬರ ಮೇಲೊಬ್ಬರು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು. ಬಿಜೆಪಿ ನಾಯಕರಾದ ಶ್ರೀರಾಮುಲು ಹಾಗೂ ಡಿ.ವಿ.ಸದಾನಂದಗೌಡ ಕೂಡ ಬಾಯಿ ತಪ್ಪಿ ತಮ್ಮ ಪಕ್ಷದ ನಾಯಕರನ್ನೇ ಟೀಕಿಸಿದ್ದರು.