ದೇಶದ ಬ್ಯಾಂಕಿಂಗ್‌ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣಕ್ಕೆ ನಡೆದ ಹಿನ್ನೆಲೆಯಲ್ಲಿ ಈ ಬ್ಯಾಂಕ್ ಗೆ ಕೆಟ್ಟ ಹೆಸರು ಬಂದ ಹಿನ್ನೆಲೆಯಲ್ಲಿ  ಇದರ ಶಾಖೆಯೊಂದನ್ನು ಮುಚ್ಚಲು ನಿರ್ಧಾರ ಮಾಡಲಾಗಿದೆ. 

ಮುಂಬೈ: ದೇಶದ ಬ್ಯಾಂಕಿಂಗ್‌ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣಕ್ಕೆ ಸಾಕ್ಷಿಯಾದ ಮುಂಬೈನಲ್ಲಿರುವ ಪಂಜಾಬ್‌ ನ್ಯಾಷನಲ್‌ ಬ್ಯಾಂಕಿನ ಬ್ರಾಡಿ ಹೌಸ್‌ ಶಾಖೆಯನ್ನು ಮುಚ್ಚಲು ನಿರ್ಧರಿಸಲಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉದ್ಯಮಿ ನೀರವ್‌ ಮೋದಿ ಮತ್ತು ಆತನ ಕುಟುಂಬ ಸದಸ್ಯರು 13000 ಕೋಟಿ ರು. ವಂಚನೆ ನಡೆಸಿದ್ದು ಇದೇ ಶಾಖೆಯಲ್ಲಿ. ಈ ಶಾಖೆಯಿಂದಾಗಿ ಇಡೀ ಬ್ಯಾಂಕಿಗೆ ಕೆಟ್ಟಹೆಸರು ಬಂದ ಕಾರಣ ಅದನ್ನು ಮುಚ್ಚಲು ನಿರ್ಧರಿಸಲಾಗಿದೆ. 

ಈ ಶಾಖೆಯಲ್ಲಿದ್ದ ಎಲ್ಲಾ ಗ್ರಾಹಕರ ಖಾತೆಗಳನ್ನು ಬ್ಯಾಂಕಿನ ಇನ್ನೊಂದು ಶಾಖೆಗೆ ವರ್ಗಾಯಿಸಲಾಗುವುದು.