Asianet Suvarna News Asianet Suvarna News

ಅನುಮತಿ ಇಲ್ಲದೇ ರ್ಯಾಫ್ಟಿಂಗ್ :ಪಂಚಾಯಿತಿ-ಮಾಲಿಕರ ನಡುವೆ ಕಿತ್ತಾಟ

ಗ್ರಾಮ ಪಂಚಾಯಿತಿ ಮತ್ತು ಕಾವೇರಿ ರಿವರ್ ರ್ಯಾಪ್ಟಿಂಗ್ ಮಾಲಿಕರ ನಡುವೆ ಜಾಗಕ್ಕಾಗಿ ಕಿತ್ತಾಟ ಆರಂಭವಾಗಿದೆ.  ಸೋಮವಾರ ಪೇಟೆ ತಾಲ್ಲೂಕಿನ ಗ್ರಾಮ ಪಂಚಾಯಿತಿಗೆ ಸೇರಿದ ದುಬಾರೆ ನದಿ ತೀರದಲ್ಲಿ ರ್ಯಾಫ್ಟಿಂಗ್ ಮಾಲಿಕರು ಪಂಚಾಯಿತಿಯಿಂದ ಅನುಮತಿ ಇಲ್ಲದೇ ರ್ಯಾಪ್ಟಿಂಗ್ ನಡೆಸುತ್ತಿದ್ದಾರೆ ಎಂದು ಆರೋಪ ಕೇಳಿಬಂದಿದೆ.

Clashes Between river rafting Owners and village panchayat in Madikeri
  • Facebook
  • Twitter
  • Whatsapp

ಕೊಡಗು(ನ.3): ಪ್ರವಾಸಿಗರನ್ನು ಆಕರ್ಷಣೆ ಮಾಡುವ ದುಬಾರೆ ಕಾವೇರಿ ನದಿ ತೀರದ ಜಾಗ ಈಗ ಗೊಂದಲದ ಗೂಡಾಗಿದೆ. ಗ್ರಾಮ ಪಂಚಾಯಿತಿ ಮತ್ತು ಕಾವೇರಿ ರಿವರ್ ರ್ಯಾಪ್ಟಿಂಗ್ ಮಾಲಿಕರ ನಡುವೆ ಜಾಗಕ್ಕಾಗಿ ಕಿತ್ತಾಟ ಆರಂಭವಾಗಿದೆ.  ಸೋಮವಾರ ಪೇಟೆ ತಾಲ್ಲೂಕಿನ ಗ್ರಾಮ ಪಂಚಾಯಿತಿಗೆ ಸೇರಿದ ದುಬಾರೆ ನದಿ ತೀರದಲ್ಲಿ ರ್ಯಾಫ್ಟಿಂಗ್ ಮಾಲಿಕರು ಪಂಚಾಯಿತಿಯಿಂದ ಅನುಮತಿ ಇಲ್ಲದೇ ರ್ಯಾಪ್ಟಿಂಗ್ ನಡೆಸುತ್ತಿದ್ದಾರೆ ಎಂದು ಆರೋಪ ಕೇಳಿಬಂದಿದೆ.

ಇನ್ನು, ದುಬಾರೆ ನದಿ ತೀರದಲ್ಲಿ ರ್ಯಾಪ್ಟಿಂಗ್ ಗಾಗಿ  ಟಿಕೇಟ್  ಕೌಂಟರ್‌ ತೆರೆಯಲಾಗಿದ್ದು, ಇದಕ್ಕೂ ಅನುಮತಿ ಪಡೆದಿಲ್ಲವಂತೆ. ಈ ಹಿನ್ನೆಲೆ,  ಆಕ್ರೋಶಗೊಂಡ ಗ್ರಾಮ ಪಂಚಾಯ್ತಿ ಸದಸ್ಯರು ಬಲವಂತವಾಗಿ ಶೆಡ್'ಗೆ ಬೀಗ ಹಾಕಿದ್ದರು. ಆದರೂ ಮತ್ತೆ ಟಿಕೇಟ್ ಕೌಂಟರ್ ಆರಂಭ ಮಾಡಿದ್ದು ಗಲಾಟೆಗೆ ಕಾರಣವಾಗಿದೆ. ನದಿ ತೀರ ಗ್ರಾಮ ಪಂಚಾಯಿತಿಗೆ ಒಳಪಡಿಸುವುದಿಲ್ಲ.  ಪ್ರವಾಸಿಗರಿಗಾಗಿ ತಾತ್ಕಲಿಕವಾಗಿ ಶೆಡ್ ಮಾಡಿಕೊಂಡಿದ್ದೇವೆ. ನಾವು ರ್ಯಾಫ್ಟಿಂಗ್ ನಡೆಸಲು ಅನುಮತಿ ಕೇಳಿದರೂ, ಪಂಚಾಯಿತಿ ಅನುಮತಿ ನೀಡಿಲ್ಲ ಎನ್ನುತ್ತಾರೆ ಮಾಲಿಕ ಸಂಘದವರು.

Follow Us:
Download App:
  • android
  • ios