ಕ್ಯಾಬ್ ಚಾಲಕ ಉತ್ತರಹಳ್ಳಿ ನಿವಾಸಿ ರಾಜೇಶ್ ಎಂಬಾತನ ಕೈಗೆ ತೀವ್ರ ಗಾಯಗಳಾಗಿವೆ.
ಬೆಂಗಳೂರು(ಜ.01): ಹೊಸ ವರ್ಷದ ಸಂಭ್ರಮದ ನಡುವೆಯೇ ತಲ್ವಾರ್'ನಲ್ಲಿ ಕ್ಯಾಬ್ ಚಾಲಕನ ಹಲ್ಲೆ ನಡೆದಿರುವ ಘಟನೆ ಎಂ.ಜಿ. ರೋಡ್'ನಲ್ಲಿ ನಡೆದಿದೆ.
ಕಾರು ಮತ್ತು ಬೈಕ್ ಪರಸ್ಪರ ಡಿಕ್ಕಿ ಸಂಭವಿಸಿದೆ, ಈ ವೇಳೆ ಆಕ್ಟೀವಾ ಮತ್ತು ಬೈಕ್'ನಲ್ಲಿ ಬಂದ ದುಷ್ಕರ್ಮಿಗಳು, ದಿಢೀರಾಗಿ ಕ್ಯಾಬ್ ಚಾಲಕನಿಗೆ ತಲ್ವಾರ್'ನಿಂದ ಹಲ್ಲೆ ಮಾಡಿದ್ದಾರೆ. ಕ್ಯಾಬ್ ಚಾಲಕ ಉತ್ತರಹಳ್ಳಿ ನಿವಾಸಿ ರಾಜೇಶ್ ಎಂಬಾತನ ಕೈಗೆ ತೀವ್ರ ಗಾಯಗಳಾಗಿವೆ.
ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
