ಈ ವಾರ ಯೋಗಿ ದುನಿಯಾ, ಇದಂ ಪ್ರೇಮಂ ಜೀವಂ, ಸೂಜಿಗ, ನಂಜುಂಡಿ ಕಲ್ಯಾಣ, ಹೀಗೊಂದು ದಿನ,  ಪ್ರೇಮವೇ, ಮುಖ್ಯಮಂತ್ರಿ ಕಳೆದೋದ್ನಪೋ  ಸೇರಿ 8 ಸಿನಿಮಾಗಳು  ಬಿಡುಗಡೆ ಸಿದ್ಧವಾಗಿದ್ದವು. ಆದರೆ ಬಂದ್ ಹಿನ್ನೆಲೆಯಲ್ಲಿ ರಿಲೀಸ್ ಮುಂದೂಡಲಾಗಿದೆ.

ಬೆಂಗಳೂರು : ಕೆಜಿ ರಸ್ತೆಯಲ್ಲಿರುವ ಸಂತೋಷ್ ಚಿತ್ರಮಂದಿರದಲ್ಲಿ ಟಗರು , ನರ್ತಕಿ ಥಿಯೇಟರ್’ನಲ್ಲಿ ಪ್ರೇಮ ಬರಹ ಚಿತ್ರಗಳು ಪ್ರದರ್ಶನ ಕಾಣುತ್ತಿದ್ದವು.

ದಕ್ಷಿಣ ಭಾರತೀಯ ಚಿತ್ರರಂಗ ಯುಓಫ್‌ಓ ಮತ್ತು ಕ್ಯೂಬ್ ಸಂಸ್ಥೆಗಳ ವಿರುದ್ಧ ನಡೆಸುತ್ತಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಇಂದು ಚಿತ್ರ ಪ್ರದೆರ್ಶನವನ್ನು ನಿಲ್ಲಿಸಲಾಗಿದೆ. ನಾಳೆಯಿಂದ ಮತ್ತೆ ಎಂದಿನಂತೆ ಚಿತ್ರ ಪ್ರದರ್ಶನವು ಮುಂದುವರಿಯಲಿದೆ.

ಆದರೆ ನಾಳೆ ಮಾತುಕತೆಯ ನಂತರ ಮುಂದಿನ ವಾರ ಚಿತ್ರಗಳನ್ನು ರಿಲೀಸ್ ಮಾಡಬೇಕೇ, ಬೇಡವೇ ಎನ್ನುವ ವಿಚಾರವು ನಿರ್ಧಾರವಾಗಲಿದೆ.

ಈ ವಾರ ಯೋಗಿ ದುನಿಯಾ, ಇದಂ ಪ್ರೇಮಂ ಜೀವಂ, ಸೂಜಿಗ, ನಂಜುಂಡಿ ಕಲ್ಯಾಣ, ಹೀಗೊಂದು ದಿನ, ಪ್ರೇಮವೇ, ಮುಖ್ಯಮಂತ್ರಿ ಕಳೆದೋದ್ನಪೋ ಸೇರಿ 8 ಸಿನಿಮಾಗಳು ಬಿಡುಗಡೆ ಸಿದ್ಧವಾಗಿದ್ದವು. ಆದರೆ ಬಂದ್ ಹಿನ್ನೆಲೆಯಲ್ಲಿ ರಿಲೀಸ್ ಮುಂದೂಡಲಾಗಿದೆ.