ಅಗತ್ಯ ಬಿದ್ದರೆ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿಯ ವಿಚಾರಣೆಯೂ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಬಳ್ಳಾರಿ (ಡಿ.20): ಅಮಾನತಾಗಿರುವ ಕೆಎಎಸ್​​ ಅಧಿಕಾರಿ ಭೀಮಾನಾಯ್ಕ್​​​ ಕಾರು ಚಾಲಕ ರಮೇಶ್ ಆತ್ಮಹತ್ಯೆ ಪ್ರಕರಣದ ಸಿಐಡಿ ತನಿಖೆ ಚುರುಕುಗೊಂಡಿದೆ.

ಬೆಂಗಳೂರಿನಲ್ಲಿ ಸಂಸದ ಶ್ರೀರಾಮುಲು ಗನ್'​ಮ್ಯಾನ್​​​​​​​ ಚನ್ನಬಸವ ವಿಚಾರಣೆ ನಡೆಸಲಾಗುತ್ತಿದೆ. ಬ್ಲ್ಯಾಕ್​ ಅಂಡ್​ ವೈಟ್ ಮನಿ ದಂಧೆ ವಿಚಾರವಾಗಿ ಸಿಐಡಿ ವಿಚಾರಣೆ ನಡೆಸುತ್ತಿದ್ದು, ಅಗತ್ಯ ಬಿದ್ದರೆ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿಯ ವಿಚಾರಣೆಯೂ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಶ್ರೀರಾಮುಲು ಗನ್'​​​​ಮ್ಯಾನ್​ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಈಗಾಗಲೇ​​ ನೀಡಲಾಗಿದೆ.