ಮಂಗಳೂರು (ಸೆ. 18): ಡಿವೈಎಸ್’ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ಧನ ಪೂಜಾರಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಆರೋಪಿಗಳನ್ನು ಬದುಕಿಸಲು ಸಿಐಡಿ ತನಿಖೆ ನಡೆಸಲಾಗಿದೆ. ಹೀಗಾಗಿ ಗಣಪತಿ ಮರಣಪೂರ್ವ ಹೇಳಿಕೆ ಪರಿಗಣಿಸಿ, ಸುಪ್ರೀಂಕೋರ್ಟ್ ಮೂಲಕ ತನಿಖೆ ನಡೆಯಬೇಕಿದೆ ಎಂದು ಪೂಜಾರಿ ಹೇಳಿದ್ದಾರೆ.
ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಜಾರ್ಜ್ಗೆ ಕ್ಲೀನ್ಚಿಟ್ ಸಿಕ್ಕಿದೆ, ಇನ್ನು ಜಾರ್ಜ್ ಮತ್ತೆ ಸಂಪುಟಕ್ಕೆ ಸೇರಿದರೆ ಕಾಂಗ್ರೆಸ್ ಕಥೆ ಮುಗಿಯಿತು, ಎಂದು ಪೂಜಾರಿ ಹೇಳಿದ್ದಾರೆ.
